ಚಿತ್ರದುರ್ಗ: ಹೊಂಡಗುಂಡಿಯ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ದಂಪತಿ ರಸ್ತೆಗೆಸೆಯಲ್ಪಟ್ಟ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮೈಸೂರು ಪ್ರಧಾನ ರಸ್ತೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ದಂಪತಿ ಅಪಾಯದಿಂದ ಪಾರಾಗಿದ್ದಾರೆ.
ಮೈಸೂರು ಹಾಗೂಬಳ್ಳಾರಿ , ಬಾಂಬೆಗೆಹೋಗುವ ಮುಖ್ಯರಸ್ತೆ ಇದಾಗಿದ್ದು, ಈ ರಸ್ತೆ ದುರಸ್ತಿಗೊಂಡು ಸುಮಾರು ವರ್ಷಗಳೇ ಕಳೆದಿದ್ದು, ಹೊಂಡಹೊಂಡಿಗಳಿಂದ ತುಂಬಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು ದೂರು ನೀಡಿದರೂ ಸಂಬಂಧ ಪಟ್ಟ ಇಲಾಖೆಯಅಧಿಕಾರಿಗಳು ನಮಗೂಇದಕ್ಕೂ ಯಾವುದೇ ತರಹದ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಹಿರಿಯೂರು ತಾಲ್ಲೂಕಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯು ಬಹಳ ಕಿರಿದಾಗಿದ್ದು, ಈ ರಸ್ತೆಯ ಮುಖಾಂತರವೇದಿನನಿತ್ಯ ಓಡಾಡುವ ವಾಹನಗಳ ಸಂಖ್ಯೆಯು ಸಹ ಹೆಚ್ಚಾಗುತ್ತಿದ್ದು ಹಾಗೂಶಾಲಾ- ಕಾಲೇಜುಗಳಿಗೆ ಹೋಗುವಂತಹವಿದ್ಯಾರ್ಥಿ/ ವಿದ್ಯಾರ್ಥಿನಿಯರೂ ಸಹ ವಾಹನಗಳ ಓಡಾಡುವಿಕೆಯಿಂದ ರಸ್ತೆಗಳನ್ನು ದಾಟಲು ತುಂಬಾ ಹರಸಾಹಸ ಪಡುವಂತಹ ಪರಸ್ಥಿತಿಗಳು, ಉಂಟಾಗಿದೆ,.
ಒಂದಿನಲ್ಲ ಎರಡು ದಿನ ಅಲ್ಲಾ ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿಯ ವರೆಗೂ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಹ ತೀವ್ರ ಹೆಚ್ಚುತ್ತಿದ್ದು ಈ ಟ್ರಾಫಿಕ್ ಜಾಮ್ ಗೆ ಕಡಿವಾಣ ಹಾಕುವುದು ಯಾವಾಗ ಎಂಬುದೇ ಜನಸಾಮಾನ್ಯರುಗಳ ಮಾತಾಗಿದೆ.
ಈ ರಸ್ತೆಯಲ್ಲಿ ದಿನನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಆಕ್ಸಿಡೆಂಟ್ ಗಳು ಆಗುತ್ತಿದ್ದು ,ಬಡ ಕುಟುಂಗಳು ಬೀದಿ ಪಾಲಾಗುತ್ತಿರುವುದಕ್ಕೂ ಸಹ ಇಂದಿನಈ ದುರಾಡಳಿತ ಬಿ ಜೆ ಪಿ ಸರ್ಕಾರವೇ ಭಾಗಶಃ ಮೂಲಕಾರಣ ವೆಂಬುದು ತಾಲ್ಲೂಕಿನ ಜನರ ಮಾತಾಗಿದೆ .
ತಾಲ್ಲೂಕಿನ ಶಾಸಕರು ಅತಿ ಶೀಘ್ರದಲ್ಲಿಇದರ ಬಗ್ಗೆ ತೀವ್ರ ಗಮನ ತೆಗೆದುಕೊಂಡು ದಿನನಿತ್ಯ ದ ಈ ಸಮಸ್ಯೆ ಗಳಿಗೆ ಅತಿ ಶೀಘ್ರದಲ್ಲೆ ಈ ರಸ್ತೆಯನ್ನುದುರಾಸ್ತಿಗೊಳಿಸಿ ರಸ್ತೆಯನ್ನು ಹೊಸದಾಗಿ ನವೀಕರಣ ಮಾಡಿಸಿಕೊಡಬೇಕಾಗಿ ಈ ಮೂಲಕ ಹಿರಿಯೂರು ತಾಲ್ಲೂಕಿನ ನಾಗರಿಕರು ತಿಳಿಸಿದ್ದಾರೆ.
ವರದಿ: ಮುರುಳಿಧರನ್ ಆರ್.,ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy