ಪೆರ್ನಾಜೆ: “ಸ್ವರಸಿಂಚನ” ಸಂಗೀತ ಶಾಲೆ ವಿಟ್ಲ ಮತ್ತು ಪಡಿಬಾಗಿಲು ಶಾಖೆಯ ವಿದ್ಯಾರ್ಥಿಗಳಿಂದ ಶ್ರೀ ಭಗವತಿ ದೇವಸ್ಥಾನ ಪೂಜಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಆಗಸ್ಟ್ 25 ರಂದು ನಡೆದ ಭಕ್ತಿ ಗಾನ ಸಂಗೀತ ಕಾರ್ಯಕ್ರಮ ನಡೆಯಿತು.
ದೇಗುಲದ ವ್ಯವಸ್ಥಾಪಕರಾದ ಕೇಶವ ಆರ್.ವಿ.ದೀಪ ಪ್ರಜ್ವಲನೆ ಮಾಡಿ ಮಾತನಾಡಿ, ಸಂಗೀತ ಶಿಕ್ಷಕಿಯ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ವೈವಿಧ್ಯಮಯ ವಿನ್ಯಾಸದಲ್ಲಿ ಸುಂದರ ಹಾಡುಗಳ ಜೋಡಣೆಯಲ್ಲಿ ಪ್ರತಿಭೆಗಳು ಹೊರ ಹೊಮ್ಮುತಿರುವುದನ್ನು ಕಂಡಾಗ ಮನ ತುಂಬಿ ಬರುತ್ತದೆ. ಹಾಗೆ ಈ ವಿದ್ಯಾರ್ಥಿಗಳಿಗೆ ಮುಂದೆ ಉತ್ತಮ ಭವಿಷ್ಯ ಇದೆ ಎಂದು ಮೆಚ್ಚುಗೆಯ ನುಡಿಯನ್ನು ನುಡಿದರು.
ವಿಠಲ ಬಾಲಿಕ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ. ಕೃಷ್ಣ ಭಟ್ , ಗೋಪಾಲಕೃಷ್ಣ ನಾಯಕ್ ಪಾಡಿಬಾಗಿಲು, ವಿಟ್ಲ ಸುಪ್ರ ಜೀತ್ ಐಟಿಐ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಘುರಾಮ ಶಾಸ್ತ್ರಿ ಕೋಡಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಸಿಂಚನ ಲಕ್ಷ್ಮಿ ಕೋಡಂದೂರು ಪ್ರಾರ್ಥನೆ ಮಾಡಿದರು.
ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರು ಸ್ವಾಗತಿಸಿದರು. ಪದ್ಮರಾಜ್ ಚಾರ್ವಾಕ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಪಕ್ಕ ವಾದ್ಯದಲ್ಲಿ ಅಮ್ಮು ಮಾಸ್ಟರ್ ಕಾಸರಗೋಡು ಕೀಬೋರ್ಡ್ ನಲ್ಲಿ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು. ರಿದಂಪ್ಯಾಡ್ನಲ್ಲಿ ಸುಹಾಸ್ ಹೆಬ್ಬಾರ್ ಪುತ್ತೂರು ,ಕೊಳಲು ವಾದಕರಾಗಿ ಸುರೇಂದ್ರ ಆಚಾರ್ಯ ಕಾಸರಗೋಡು ಸಹಕರಿಸಿದರು.
ಸುಂದರ ಕಾರ್ಯಕ್ರಮದ ಸೌಂದರ್ಯತೆಯ ಸೊಬಗನ್ನು ವೈಭವಕ್ಕೆ ಕಿಕ್ಕೇರಿದು ತುಂಬಿದ ಸಭಾಂಗಣವೇ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಎಲ್ಲರ ಮೆಚ್ಚುಗೆಗಳಿಸಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q