ತುಮಕೂರು: ಮಾನವನ ಮನಸ್ಸು ಆತ್ಮಗಳ ಶುದ್ದಿಗೆ ಸ್ವಾಧ್ಯಾಯದ ಚಿಂತನೆಗಳು ಅಗತ್ಯವಾಗಿದೆ ಎಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರಿಂದು ತುಮಕೂರಿನ ಜೈನ ಭವನದಲ್ಲಿ ನಡೆದ ಮಂಗಳ ಪುರಪ್ರವೇಶ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಕ್ತದ ಶುದ್ಧಿ ಕರುಣಕ್ಕೆ ಡಯಾಲಿಸಿಸ್ ಹೇಗೋ, ಮಾನವನ ಮನಸ್ಸು ಶುದ್ದಿ, ಆತ್ಮ ಶುದ್ದಿಗೆ ಚಿಂತನೆಗಳು ಅಗತ್ಯ. ಪೂಜೆ , ನೊoಪಿ , ವೃತ, ಆರಾಧನೆಗಳನ್ನ ಮಾಡುವುದು ಸ್ವಾದ್ಯಾಯವಾಗಿದೆ. ತಮ್ಮ ವೃತ್ತಿಯ ಜೊತೆಗೆ ಬಿಡುವು ಮಾಡಿಕೊಂಡು ಸ್ವಾಧ್ಯಾಯಗಳನ್ನು ಮಾಡುವಂತೆ ತಿಳಿಸಿದರು.
ಇಲ್ಲಿ ಧರ್ಮ ಸಂಸ್ಕಾರ ವಿದೆ ಧಾರ್ಮಿಕ ಸಂಸ್ಕಾರ ತುಂಬಿದ ಲಕ್ಷ್ಮಿ ಸೇನಾ ಭಟ್ಟರಕ ಪೀಠವಿದೆ ಎಂದ ಅವರು, ಇಲ್ಲಿ ಹಲವಾರು ಚಾತುರ್ಮಾಸಗಳು ನಡೆದಿವೆ, ಇಲ್ಲಿ ಶ್ರೇಷ್ಠ ಮುನಿ ಸಂಸ್ಕಾರ ವಂತರಿದ್ದಾರೆ. ಪಿಂಚಿ ಮಂದಿರ ,ಚಂದ್ರನಾಥ ಮೂರ್ತಿ, ಮಂದರಗಿರಿ ಬೆಟ್ಟದ ಮೇಲಿನ ಜೈನ ಬಸದಿಗಳ ಸಂಕೀರ್ಣ, ಜೀರ್ಣೋದ್ಧಾರ ಮಾಡಿ ಕೊಡುಗೆ ನೀಡಿದ್ದಾರೆ ಎಂದ ಭಟ್ಟರಕ ಶ್ರೀಗಳು, ಕ್ಷೇತ್ರದ ಏಳಿಗೆಗೆ ದುಡಿದ ಹಿರಿಯ ಚೇತನಗಳನ್ನ ಸ್ಮರಿಸಿದರು. ಜ್ಞಾನ ಸಾಹಿತ್ಯಕ್ಕೆ ಚಾರುಕಿರ್ತಿ ಶ್ರೀಗಳ ಕೊಡುಗೆ ಅಪಾರ ಎಂದವರು ,ಈ ವರ್ಷ ಕ್ಷೇತ್ರದಲ್ಲಿ ಕನ್ಯಾಶ್ರಮ ಪ್ರಾರಂಬಿಸಲಾಗಿದೆ. 108 ಮಕ್ಕಳಿಗೆ ಆಶ್ರಮದಲ್ಲಿದ್ದು, ಮುಂದಿನ ಮಹಾಮಸ್ತಕಾಭಿಷೇಕದ ವೇಳೆಗೆ 1008 ಮಕ್ಕಳ ಆಶ್ರಮ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
“ಅಂತರ್ಜಾತಿ ವಿವಾಹ– ಪ್ರೇಮ ವಿವಾಹ ಬೇಡ”
ಮಂಗಲ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಶ್ರೀ ಲಕ್ಷ್ಮಿ ಸೇನಾ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಚಾರುಕೀರ್ತಿ ಭಟ್ಟಾರಕರು ಸರಳತೆ ಹೊಂದಿ ಉತ್ತಮ ಚಿಂತಕರಾಗಿದ್ದು, ಅವರ ತತ್ವಗಳು ಜನರಿಗೆ ವೇದ ವಾಕ್ಯವಾಗಿತ್ತು ಅವರ ಕನಸು ನನಸು ಮಾಡಲು ಅಭಿನವರಾಗಿ ಚಾರು ಕೀರ್ತಿ ಶ್ರೀಗಳು ಬಂದಿದ್ದಾರೆ, ಈ ಭಾಗದ ಜೈನ ಬಸದಿಗಳಿಗೆ ತುಮಕೂರು ಕೇಂದ್ರ ಬಿಂದುವಾಗಿ ಕಾರ್ಯ ನಿರ್ವಹಿಸಿದ್ದು ಇದು ಧರ್ಮ ನಗರಿಯಾಗಿದೆ ಎಂದರು.
ಅಂತರ್ಜಾತಿ ವಿವಾಹ ಹಾಗೂ ಪ್ರೇಮ ವಿವಾಹವಾಗಬಾರದು ಎಂಬ ದೃಷ್ಟಿಯಿಂದ ಕ್ಷೇತ್ರದಲ್ಲಿ 3,000, ಹೆಣ್ಣು ಮಕ್ಕಳಿಗೆ ವೃತ ನೀಡಲಾಗುತ್ತಿದೆ, ಜನ್ಮ ಜನ್ಮಾಂತರದ ಪುಣ್ಯ ಸಂಪಾದನೆಗೆ ನೆಮ್ಮದಿ, ಶಾಂತಿ ಜೀವನಕ್ಕೆ ಇದು ಅಗತ್ಯವಾಗಿದ್ದು, ಕರ್ಮಗಳನ್ನು ಗೆದ್ದು ನಾವು ಜೈನರಾಗಿದ್ದು ಧರ್ಮಚರಣೆಯಿಂದ ಧರ್ಮದ ಉಳಿವು ಸಾಧ್ಯ ಎಂದ ಅವರು ಧರ್ಮತ್ಮರಿಲ್ಲದೆ ಧರ್ಮದ ಉಳಿವು ಸಾಧ್ಯವಿಲ್ಲ ಎಂದರು.
ಕಲ್ಲು, ಮಣ್ಣು, ಭೂಮಿ, ಗಾಳಿಯಲ್ಲಿ ಜೈನ ಧರ್ಮವಿದ್ದು, ಈ ಜೈನ ಧರ್ಮ ವೃತ ಆಚರಣೆಯಿಂದ ಬಂದಿದೆ ಎಂದರು. ಕಲ್ಲು, ಮಣ್ಣು, ಭೂಮಿ, ಗಾಳಿ ಹುಟ್ಟಿದಾಗಲೇ ಜೈನ ಧರ್ಮ ಜನ್ಮ ತಾಳಿದೆ, ದ್ರಾವಿಡ ಭಾಷೆ ಜೈನ ಭಾಷೆಯಾಗಿದ್ದು, ಕನ್ನಡ ಭಾಷಿಗರು ಮೂಲ ಜೈನರಾಗಿದ್ದಾರೆ ಎಂದರು.
ಜೈನ ತತ್ವ , ಸಿದ್ಧಾಂತಗಳನ್ನು ಸಾರುವ ಯಾವುದೇ ಮಹಿಳೆ ವೃತ ಸುರಕ್ಷಿತವಾಗಿರಲು “ಣಮೋಕಾರ ಮಂತ್ರ” ” ಪಂಚ ನಮಸ್ಕಾರ “ಮಾಡುವಂತೆ ಕರೆ ನೀಡಿದರು.
ತುಮಕೂರು ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ತುಮಕೂರು ಧಾರ್ಮಿಕ ಕೇಂದ್ರವಾಗಿದ್ದು ಪೂಜ್ಯರ ಪಾದಸ್ಪರ್ಶದಿಂದ ಧಾರ್ಮಿಕ ಪರಂಪರೆ ಹೆಚ್ಚಿದೆ. ಶಾಂತಿ ಇಂದ ಇರಲು ಜೈನ ಧರ್ಮದ ಆದರ್ಶ ತತ್ವ ಪಾಲಿಸುವಂತೆ ಕರೆ ನೀಡಿದವರು ಧಾರ್ಮಿಕ ವಾತಾವರಣ ನಿರಂತರವಾಗಿರಲಿ ಎಂದು ಆಶಿಸಿದರು.
ಪಿ. ಎಸ್ .ಐ ಗುರುನಾಥ್ ಮಾತನಾಡಿ, ಕೇಶಿರಾಜನ ದರ್ಪಣದಿಂದ ಪೂಜ್ಯರ ಅರ್ಥ ಭಾವಗಳನ್ನು ಅಳವಡಿಸಿಕೊಂಡಾಗ, ಗುರು ಶಬ್ದಗಳನ್ನು ಅವರ ಶಬ್ದಗಳಿಂದ ಆಲಿಸಿದರೆ ಪಂಚೇಂದ್ರಿಯಗಳನ್ನು ಗೆಲ್ಲಲು ಸಾಧ್ಯ, ಅಕ್ಷರಗಳಿಂದ ಪದಗಳನ್ನು ಜೋಡಿಸಿ ಕಾವ್ಯಗಳನ್ನು ರಚಿಸಿದರೆ ಮೋಕ್ಷ ಪಡೆಯಲು ಸಾಧ್ಯ. ಪರಿಶುದ್ಧರಿಗೆ ಶುದ್ಧ ಪದ ಬಳಸುತ್ತಾರೆ. ಇದು ತೀರ್ಥಂಕರರ ಪದ ಎಂದ ಅವರು, ಕನ್ನಡ ಭಾಷೆ ಜೀವಂತವಾಗಿರಲು ಜೈನ ಕವಿಗಳು ಕಾರಣ ಎಂದರು.
ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ಅಧ್ಯಕ್ಷ ಟಿ.ಡಿ.ಬಾಹುಬಲಿ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಶೋಭಾ ಯಾತ್ರೆ ಉದ್ಘಾಟಿಸಿದರು. ಉಭಯ ಭಟ್ಟಾರಕ ಶ್ರೀಗಳಿಂದ ಜೈನ್ ಭವನದ ಜಿನ ಮಂದಿರದಲ್ಲಿ ಶ್ರೀರಾಮಚಂದ್ರ ಸ್ಯಾದ್ವದಿ ಸ್ವಾಧ್ಯಾಯ ಮಂದಿರ ಉದ್ಘಾಟನೆ ನಡೆಯಿತು.
ವಿವಿಧ ಸಂಘ–ಸಂಸ್ಥೆಗಳಿಂದ ಉಭಯ ಭಟ್ಟಾರಕರಿಗೆ ಶಾಂತಿವಿಧಾನ , ಪುಷ್ಪಾರ್ಚನೆ, ಅರ್ಘ್ಯ ಗಳು ನೆರವೇರಿದವು.
ಇದೇ ಸಂದರ್ಭದಲ್ಲಿ ಪೂಜ್ಯ ಭಟ್ಟಾರಕ ಶ್ರೀಗಳಿಗೆ ಅಷ್ಟ ವಿಧಾರ್ಚನೆ ಹಾಗೂ ಪಾದಪೂಜೆ ನಡೆಯಿತು. 90 ವರ್ಷ ಮೇಲ್ಪಟ್ಟ ಹಿರಿಯ ಶ್ರಾವಕ– ಶ್ರಾವಕಿಯರನ್ನ ಸನ್ಮಾನಿಸಲಾಯಿತು.
ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಅಭಿನವ ಚಾರು ಕೀರ್ತಿಭಟ್ಟಾರಕ ಶ್ರೀಗಳ ಮಂಗಳ ಪುರ ಪ್ರವೇಶದೊಂದಿಗೆ ಮಹಾವೀರ ಭವನದಲ್ಲಿ ಸಮಾವೇಶಗೊಂಡ ಉಭಯ ಭಟ್ಟರಕ ಶ್ರೀಗಳು ನಂತರ ಭಗವಾನ್ ಮಹಾವೀರ ರಸ್ತೆ, ಬಿ.ಎಚ್. ರಸ್ತೆ, ಎಂ.ಜಿ.ರಸ್ತೆ, ಗುಂಚಿ ಚೌಕ, ಟೌನ್ ಸ್ಟೇಷನ್ ರಸ್ತೆ, ಸ್ವತಂತ್ರ ಚೌಕ, ಮಂಡಿಪೇಟೆ ರಸ್ತೆ, ಚಿಕ್ಕಪೇಟೆ ರಸ್ತೆ, ಗ್ರಾಮದೇವತೆ ಸರ್ಕಲ್, ಹಳೆ ಪೋಸ್ಟ್ ಆಫೀಸ್ ರಸ್ತೆಯ ಮೂಲಕ ಈ ಚಿಕ್ಕಪೇಟೆಯ ಶ್ರೀ ಪಾರ್ಶ್ವನಾಥ ಜಿನ ಮಂದಿರದಲ್ಲಿ ಸಮಾವೇಶಗೊಂಡಿತು.
ಶ್ರೀ ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಹಾಗೂ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿ ಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಶ್ರೀಗಳವರ ನೇತೃತ್ವದಲ್ಲಿ ಶ್ರೀಪಾರ್ಶ್ವನಾಥ ಜೈನ ಬಸದಿಯಲ್ಲಿ ಪೂಜೆ, ಅಭಿಷೇಕ, ಆರಾಧನೆಗಳನ್ನ ನಡೆದ ನಂತರ ಜೈನ ಭವನದಲ್ಲಿ ಧಾರ್ಮಿಕ ಸಮಾವೇಶ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ್ ಹಾಲಪ್ಪ, ಹಿರಿಯ ಸಾಹಿತಿ, ಜಾನಪದ ತಜ್ಞ ಡಾ.ಪದ್ಮ ಪ್ರಸಾದ್ ಜೈನ, ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಟಿ .ಡಿ .ಬಾಹುಬಲಿ ಬಾಬು, ಮಾಜಿ ಅಧ್ಯಕ್ಷ ಸನ್ಮತಿ ಕುಮಾರ, ಉಪಾಧ್ಯಕ್ಷ ತೋವಿನಕೆರೆ ಶೀತಲ್, ಕಾರ್ಯದರ್ಶಿ ಟ.ಜೇ.ನಾಗರಾಜ್, ಖಜಾಂಚಿ ಸುಭೋದ್ ಕುಮಾರ್ ಜೈನ್, ನಿರ್ದೇಶಕರಾದ ಎಸ್.ವಿ. ಜಿನೇಶ್, ಬಿ.ಎಲ್. ಚಂದ್ರಕೀರ್ತಿ, ಎಸ್.ಜೆ.ನಾಗರಾಜ್, ಎಂ.ಬಿ.ನಾಗೇಂದ್ರ, ಜ್ವಾಲಾ ಮಾಲಿನಿ, (ಎಂ.ಎಲ್.ಎ. ಮಾಲಮ್ಮ) ಆರ್. ಏ. ಸುರೇಶ್ ಕುಮಾರ್, ಎ. ಎಸ್. ಸುನಿಲ್ ಕುಮಾರ್, ಉದ್ಯಮಿ ಟಿ.ಎನ್ .ಅಜಿತ್, ಶಾಂತಲಾ ಅಜಿತ್, ಜಿ.ಡಿ .ರಾಜೇಶ್, ಮಂಜುಳಾ ಚಂದ್ರಪ್ರಭ, ಶ್ಯಾಮಲಾ ಧರಣಿಂದ್ರಯ್ಯ, ಎಂ. ಎಸ್ .ರಮೇಶ್, ಜಿ.ಪಿ, ಉಮೇಶ ಕುಮಾರ್, ಎನ್. ಬಿ . ಶ್ರೇಯಾoಸ ಕುಮಾರ್, ಬಿ. ಆರ್. ತೀರ್ಥ ಕುಮಾರ್, ಫ್ಲವರ್ ಸುರೇಶ್, ಲತಾ ಸುಕುಮಾರ್, ಟಿ.ಕೆ .ಪದ್ಮರಾಜ್ , ಟಿ.ವಿ. ಪಾರ್ಶ್ವನಾಥ್, ಎ .ಎನ್ .ಮಂಜುನಾಥ್, ಟಿ .ಸಿ .ಶೀತಲ್ ಕುಮಾರ್ (ಬಳೆ), ಬಿ.ಎಸ್, ಪಾರ್ಶ್ವನಾಥ್, ಟಿ .ಡಿ .ಮಹಾವೀರ್ ಎ.ಆರ್ .ಬ್ರಹ್ಮ ಪ್ರಕಾಶ್, ಎಂ .ಜೆ. ಬ್ರಹ್ಮಪ್ಪ, ಬೆಳಗುಲಿ ವಿಜಯ್ ಕುಮಾರ್, ಎಸ್. ವಿ .ಪಾರ್ಶ್ವನಾಥ ಏ. ಎನ್. ರಾಜೇಂದ್ರ ಪ್ರಸಾದ್, ಶ್ರೀ ಮಂದಿರಗಿರಿ ಯಾತ್ರಾ ಸಂಘದ ಅಧ್ಯಕ್ಷರು ಹಾಗೂ ತುಮಕೂರು ತ್ಯಾಗ ಸೇವಾ ಸಮಿತಿ ಅಧ್ಯಕ್ಷ ಕೆ .ಪಿ. ವೀರೇಂದ್ರ, ಜಲಜ ಜೈನ್ ,ಚಂದ್ರಕಲಾ ನಾಗರಾಜ್ ,ಎ .ಮಂಜುನಾಥ್, ಪಚ್ಚೆಶ್ ಜೈನ್, ಮಂಜುಳಾ ಸುವೀರ್, ಸವಿತಾ ಸುಭೋದ್ ,ಶ್ರೀ ಪಾರ್ಶ್ವನಾಥ ಸಹಕಾರ ಬ್ಯಾಂಕ್ ನ ಉಪಾಧ್ಯಕ್ಷ ರಾಜೇಂದ್ರ ಪ್ರಸಾದ್ ,ನಿರ್ದೇಶಕ ರಾಜೇಂದ್ರ ಕುಮಾರ್, ಸೇರಿದಂತೆ ಶ್ರೀ ಪದ್ಮಾಂಬ ಜೈನ ಮಹಿಳಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಜೈನ್ ಭವನ್ ಶ್ರೀ ಮಹಾವೀರಭವನ್, ಶ್ರೀ ತ್ರಿಲೋಕ್ ಭವನ್, ಶ್ರೀ ಸಿದ್ಧಾಂತ ಭವನ್, ಶ್ರೀ ಶೃತ ಜೈನ್ ಮಹಿಳಾ ಮಿಲನ್ ,ಜೈನ್ ಯುವ ಫಾರಂ , ಶ್ರೀ ಪಾರ್ಶ್ವನಾಥ ಉಚಿತ ವಿದ್ಯಾರ್ಥಿ ನಿಲಯ ,ತ್ಯಾಗಿ ಸೇವಾ ಸಮಿತಿ ,ಸಿದ್ಧ ಕ್ಷೇತ್ರ ಮಂದಾರಗಿರಿ ಸಮಿತಿ ,ತುಮಕೂರು ಜೈನ ಶ್ರೀ ಪಾರ್ಶ್ವನಾಥ ಜೈನ್ ಮಿಲನ್, ತರುಣ್ ಶ್ರೀ ಜೈನ್ ಮಿಲನ್, ತ್ರಿಶಾಲ ಜೈನ್ ಮಿಲನ್, ಶ್ರೀ ಪಾರ್ಶ್ವನಾಥ ಸಹಕಾರ ಬ್ಯಾಂಕ್, ಸನ್ಮತಿ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ,ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ಶ್ರಾವಕ- ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮೋಹನ್ ಮಂಗಳಾಚಾರಣೆ ನೆರವೇರಿಸಿದರು. ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಟಿ. ಡಿ .ಬಾಹುಬಲಿ ಬಾಬು. ಸ್ವಾಗತಿಸಿ , ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕುಮುದ ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx