ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅನ್ಯಭಾಷಿಗರೊಂದಿಗಿನ ಪ್ರೀತಿ ಪ್ರೇಮದ ಬಗ್ಗೆ ಮಾತನಾಡಿದ್ದು, ಪ್ರೇಮಿಗಳಿಗೆ ವಿಶೇಷ ಸಲಹೆ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು, ಬೇರೆ ಭಾಷೆಯವರೊಂದಿನ ಕನ್ನಡಿಗರ ಪ್ರೀತಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬೇರೆ ಭಾಷೆಯ ಹುಡುಗಿಯರನ್ನು ಪ್ರೀತಿ ಮಾಡುವ ಕನ್ನಡದ ಹುಡುಗರು, ಮೊದಲು ಅವರು ಕನ್ನಡವನ್ನು ಪ್ರೀತಿಸುವಂತೆ ಕೇಳಬೇಕು, ಬಳಿಕ ನೀವು ಅವರನ್ನು ಪ್ರೀತಿ ಮಾಡುವುದಾಗಿ ಹೇಳಿ ಎಂದು ಸಲಹೆ ಕೊಟ್ಟಿದ್ದಾರೆ.
ಈ ವಿಚಾರದಲ್ಲಿ ಯಾರಿಗೂ ಹೆದರಬೇಡಿ. ನಿಮ್ಮ ಪ್ರೀತಿಯು ಕನ್ನಡದ ಮುಖೇನವಾಗಿಯೇ ಸಾಗಲಿ ಎಂದು ಹೇಳಿದ್ದಾರೆ. ಕನ್ನಡವನ್ನು ಯಾರು ಪ್ರೀತಿಸುತ್ತಾರೋ ಅವರನ್ನು ಕನ್ನಡಿಗರೂ ಪ್ರೀತಿಸುತ್ತಾರೆ ಎಂದು ಟಿ.ಎ.ನಾರಾಯಣಗೌಡರು ಒತ್ತಿ ಹೇಳಿದ್ದಾರೆ.
ಮಾಸ್ತಿಯವರ ಮಾತೃಭಾಷೆ ತಮಿಳು, ದ.ರಾ.ಬೇಂದ್ರೆಯವರ ಮಾತೃಭಾಷೆ ಮರಾಠಿ, ಟಿ.ಪಿ.ಕೈಲಾಸಂ ಅವರ ಮಾತೃಭಾಷೆ ತಮಿಳು, ಈ ಕನ್ನಡದ ಶಾಲು ಕೊಟ್ಟ ಮ.ರಾಮಮೂರ್ತಿ ಅವರ ಮಾತೃಭಾಷೆ ತೆಲುಗು. ಅವರೆಲ್ಲ ಕನ್ನಡವನ್ನು ಪ್ರೀತಿಸಿದರು, ಕನ್ನಡಿಗರೂ ಅವರನ್ನು ಪ್ರೀತಿಸಿದರು ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx