ರಾಜ್ಯದಲ್ಲಿ ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮದಲ್ಲಾದ ಹಗರಣಕ್ಕೆ ಸಂಬಂಧಿಸಿದಂತೆ ಸ್ವಪಕ್ಷದ ನಾಯಕರು ಸೇರಿದಂತೆ ಆಡಳಿತ ಪಕ್ಷವನ್ನು ಶಾಸಕ ಯತ್ನಾಳ್ ಸದನದಲ್ಲಿ ತರಾಟೆಗೆತ್ತಿಕೊಂಡರು.
ಸದನದಲ್ಲಿ ಹಗರಣಗಳ ಕುರಿತು ಪ್ರಸ್ತಾಪಿಸಿದ ಅವರು, SIT ಯಿಂದ ಯಾವುದೇ ಕಾರಣಕ್ಕೂ ನ್ಯಾಯ ಸಿಗುವುದಿಲ್ಲ, ಸರ್ಕಾರಗಳು, ರಾಜಕೀಯ ನಾಯಕರು ಅಧಿಕಾರಿಗಳನ್ನು ಬಲಿಪಶುಗಳಾಗಿ ಮಾಡುತ್ತಾರೆ. ಹೀಗೆ ಎರಡ್ಮೂರು ವರ್ಷ ಎಳೆದ ಬಳಿಕ ಮತ್ತೊಂದು ಹಗರಣ ಬಯಲಾಗುತ್ತೆ. ಆಗ ಹಳೆಯದು ಮರೆತುಹೋಗುತ್ತೆ’ ಎಂದಿದ್ದಾರೆ.
ಅಲ್ಲದೆ ವಿಪಕ್ಷಗಳು ಹೋರಾಟ ಮಾಡುತ್ತಲೇ ಇರುತ್ತವೆ. ಇದನ್ನು ಮಾಧ್ಯಮಗಳ ಭಾರೀ ಹೋರಾಟ, ಗಡಗಡ ನಡುಗಿದ ಸರ್ಕಾರ ಎಂದೆಲ್ಲಾ ತೋರಿಸುತ್ತಾರೆ. ಆದರೆ ಇಲ್ಲಿ ಗಡಗಡನೂ ಇಲ್ಲ ಪಡಪಡನೂ ಇಲ್ಲ. ಮತ್ತೆ ಪ್ರತಿಭಟನೆ ಆದ ಬಳಿಕ ಮನೆ ಬಂದು ಮುಖ್ಯಮಂತ್ರಿಗಳಿಗೆ ಫೋನ್ ಮಾಡಿ, ಸರ್ ತಪ್ಪು ತಿಳಿಯಬೇಡಿ, ಮೇಲಿನ ಪ್ರೆಶರ್, ಹೈಕಮಾಂಡ್ ಒತ್ತಡ ಇದೆ. ಹೀಗಾಗಿ ನಾವು ಮಾಡಲೇ ಬೇಕು. ನಮ್ಮ ಯಾವುದನ್ನು ತೆಗೆಯಬೇಡಿ ಎನ್ನುತ್ತಾರೆ’ ಎಂದು ಯತ್ನಾಳ್ ಹೇಳಿದ್ದಾರೆ.
ಯತ್ನಾಳ್ ಅವರ ಈ ಮಾತಿಗೆ ಇಡೀ ಸದನವೇ ನಗೆಯಲ್ಲಿ ತೇಲಿದರೆ ಬಿಜೆಪಿಯ ಹಲವು ನಾಯಕರು ತಕ್ಷಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಆ ಮನಸ್ಥಿತಿ ಇಲ್ಲ ಎಂದಿದ್ದಾರೆ. ಯತ್ನಾಳ್ ಅವರು ಒಂದು ರೀತಿಯಲ್ಲಿ ಇದು ಎಲ್ಲರಿಗೂ ಅನ್ವಯವಾಗುವಂತೆ ಹೇಳಿದರೂ ಕೂಡ ತನ್ನ ಪಕ್ಷ ಬಿಜೆಪಿಗಂತೂ ಮುಜುಗರವಾದದ್ದು ಮಾತ್ರ ಸತ್ಯ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


