ಕೊರಟಗೆರೆ : ವ್ಯವಸಾಯೋತ್ಪನ ಸಹಕಾರ ಸಂಘವು 1960ನೇ ಇಸವಿಯಲ್ಲಿ ಸ್ಥಾಪನೆಗೊಂಡಿದೆ. ತುಮಕೂರು ಜಿಲ್ಲೆಯ ಇತರೆ ತಾಲ್ಲೂಕಿನ ಸಹಕಾರ ಸಂಘಕ್ಕೆ ಹೋಲಿಕೆ ಮಾಡಿದ್ದಲ್ಲಿ ಇಲ್ಲಿನ ವ್ಯವಸಾಯೋತ್ಪನ ಸಂಘ ಲಾಭದಾಯಕವಾಗಿದೆ ಎಂದು ತಾಲ್ಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ಜಿ.ಎಂ ತಿಳಿಸಿದರು.
ಕೊರಟಗೆರೆ ತಾಲ್ಲೂಕು ವ್ಯವಯೋತ್ಪನ ಮಾರಾಟ ಸಹಕಾರ ಸಂಘದ ಪ್ರಧಾನ ಕಟ್ಟಡದ ಮೇಲ್ಭಾಗದ ಆವರಣದಲ್ಲಿ ಆಯೋಜಿಸಲಾದ 2024–25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೇರೆ ತಾಲ್ಲೂಕಿನಲ್ಲಿ ಕೆಲವು ಸಂಘಗಳು ಆದಾಯದ ಮೂಲ ಇಲ್ಲದೇ ನಷ್ಠದ ಪರಿಸ್ಥಿತಿಗೆ ಸಿಲುಕಿದೆ. ನಮ್ಮ ತಾಲ್ಲೂಕಿನಲ್ಲಿ ಆದಾಯದ ಮೂಲಗಳನ್ನು ಸೃಷ್ಠಿಸಿ ಸಂಘ ಅಭಿವೃದ್ಧಿ ಹೊಂದಿದೆ.ಈ ನಿರ್ದೇಶಕರು,ಸದಸ್ಯರ ಸಹಕಾರ, ಅತ್ಯಮೂಲ್ಯ ಸಲಹೆಯಿಂದ ಆರ್ಥಿಕವಾಗಿ ಸದೃಢವಾಗಿದೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳಾದ ರೇಣುಕಾ ಮತ್ತು ಕೀರ್ತನಾರಾದ್ಯಗೆ ಪ್ರತಿಭಾ ಪುರಸ್ಕಾರದಲ್ಲಿ ಗೌರವಿಸಲಾಗಿದೆ ಎಂದರು.
2024–25ನೇ ಸಾಲಿನ ವಾರ್ಷಿಕ ವರದಿ:
ತಾಲ್ಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನಲ್ಲಿ ‘ಎ’ ತರಗತಿಯಿಂದ 17 ಸಂಘಗಳು ಸದಸ್ಯತ್ವ ಪಡೆದು 1.82.050 ಲಕ್ಷ.ರೂ ಷೇರು ಬಂಡವಾಳ ಹೂಡಿದೆ, ‘ಬಿ’ ತರಗತಿಯಿಂದ 1773 ಸಂಘ ಸದಸ್ಯತ್ವ ಪಡೆದು 9.12.199 ಲಕ್ಷ.ರೂ ಷೇರು ಬಂಡವಾಳ ಹೂಡಿದ್ದು, ‘ಡಿ’ ತರಗತಿಯಲ್ಲಿ ಆಶಕ್ತರಿಗೆ ಸರ್ಕಾರದಿಂದ 5.53.230 ಲಕ್ಷ.ರೂ ಷೇರು ಬಂಡವಾಳ ಹೂಡಿದ್ದು, ‘ಬಿ’ ತರಗತಿ (ಅಮಾನತ್ತು) 7020.ರೂ ಒಳಗೊಂಡಂತೆ ಒಟ್ಟು 20.83.473 ಲಕ್ಷ ಷೇರು ಬಂಡವಾಳವಾಗಿ ಸಹಕಾರ ಸಂಘದಲ್ಲಿದೆ ಎಂದರು.
ವರದಿ ಸಾಲಿನಲ್ಲಿ ‘ಎ’ ತರಗತಿ ಷೇರು 92 ಸಾವಿರ ರೂ, ಹಾಗೂ ‘ಬಿ’ ತರಗತಿ ಷೇರು 1.48.238.ರೂ ಸಂಘಕ್ಕೆ ಜಮಾಗೊಂಡಿದೆ. 2025 ಮಾರ್ಚ್ 31ರ ಅಂತ್ಯಕ್ಕೆ 40.82.293.77 ಲಕ್ಷ.ರೂ ಅಪದ್ಧನ ನಿಧಿ ಹಾಗೂ 1.00.56.413 ಕೋಟಿ.ರೂ ನಿಧಿಯಾಗಿದೆ. ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕೊರಟಗೆರೆ ಶಾಖೆ ಹಾಗೂ ಇತರೆ ರಸಗೊಬ್ಬರ ಕಂಪನಿಗಳಲ್ಲಿ ನಿಶ್ಚಿತ ಠೇವಣಿ, ಷೇರು ಕೊಳ್ಳುವುದರ ಮೂಲಕ 81.03.632 ಲಕ್ಷ.ರೂ ಹೂಡಿಕೆ ಮಾಡಿರುತ್ತದೆ.
ಬಾಡಿಗೆ, ಸಾಲಗಳ ಮೇಲೆ ಬಡ್ಡಿ, ಹೂಡಿಕೆ ಮೇಲೆ ಬಡ್ಡಿ, ಇತರೆ ಆದಾಯ ಮೂಲಗಳಿಂದ ಸಂಘಕ್ಕೆ 33.23.669 ಲಕ್ಷ.ರೂ ಆದಾಯ ಬಂದಿದೆ. 2024 ರ ಮಾರ್ಚ್ ಅಂತ್ಯಕ್ಕೆ 16.72.905 ದಾಸ್ತಾನು ಹೊಂದಿದ್ದು ವರದಿ ಸಾಲಿನಲ್ಲಿ 44.02.329 ಲಕ್ಷ.ರೂ ಗಳಷ್ಟು ದಾಸ್ತಾನು ಖರೀದಿ ಮಾಡಿ 2024–25ನೇ ಸಾಲಿನಲ್ಲಿ 47.72.326 ರೂ ಗಳಷ್ಟು ಮಾರಾಟ ಮಾಡಿರುತ್ತದೆ. ವ್ಯಾಪಾರ ವೆಚ್ಚ ಕಳೆದು 1.72.613 ಲಕ್ಷ.ರೂ ಗಳಷ್ಟು ವ್ಯಾಪಾರ ಲಾಭಗಳಿಸಿದ್ದು, 2025 ಮಾರ್ಚ್ ಅಂತ್ಯಕ್ಕೆ 16.33.281.74 ಲಕ್ಷ.ರೂ ಗಳಷ್ಟು ದಾಸ್ತಾನು ಹೊಂದಿರುತ್ತದೆ.
ಸಂಘವು ಠೇವಣಾತಿ ನಿಯಮ ರಚಿಸಿಕೊಂಡು ಜಿಲ್ಲಾ ಸಹಕಾರ ಉಪ ನಿಬಂಧಕರಿಂದ ಅನುಮೋದನೆ ಪಡೆದುಕೊಂಡು ಸದಸ್ಯರಿಂದ ಪ್ರತಿನಿತ್ಯ ಪಿಗ್ಮಿ ಠೇವಣಿ ಸಂಗ್ರಹಿಸಿದ ಮೊತ್ತವನ್ನು ಸದಸ್ಯರುಗಳಿಗೆ ಬಿಡಿಪಿ ಸಾಲ ಹಾಗೂ ದ್ವಿಚಕ್ರ ವಾಹನ ಸಾಲ ನೀಡಿದ್ದು, 50.29.276ಲಕ್ಷ.ರೂ ವ್ಯಾಪಾರ ಸಾಲ ಹಾಗೂ 2.03.000 ರೂ.ಗಳಷ್ಟು ವಾಹನ ಸಾಲ ನೀಡಿದ್ದು, ವ್ಯಾಪಾರದ ಸಾಲದಲ್ಲಿ 49.19.420 ಲಕ್ಷ.ರೂ ಹಾಗೂ ವಾಹನ ಸಾಲ 3.09.271 ರೂ.ಗಳು ಜಮಾ ಬಂದಿದೆ. ವರದಿ ಸಾಲಿನ ಅಂತ್ಯದಲ್ಲಿ ವ್ಯಾಪಾರ ಮತ್ತು ವಾಹನ ಸಾಲ ಬಾಬ್ತು ೮೭.೪೫.೭೩೦ ಲಕ್ಷ.ರೂ. ಸಂಘದ ಸದಸ್ಯರುಗಳಿಂದ ಬರಬೇಕಾದ ಸಾಲವಿರುತ್ತದೆ ಎಂದು ಹೇಳಿದರು.
ಸದರಿ ಸಾಲಿನ ವಾರ್ಷಿಕದಲ್ಲಿ ಸಂಘವು 3.62.221 ಲಕ್ಷ.ರೂ ಗಳನ್ನು ಆದಾಯ ತೆರಿಗೆ ಪಾವತಿ ಮಾಡಿದ್ದು, ಬಾಕಿ ನಿಂತ ಕಂದಾಯ 5.77.783 ಲಕ್ಷ.ರೂ ಪಟ್ಟಣ ಪಂಚಾಯ್ತಿಗೆ ಪಾವತಿ ಮಾಡಿದೆ. 2024–25ನೇ ಸಾಲಿಗೆ 14.51.570 ಲಕ್ಷ.ರೂ. ನಿವ್ವಳ ಲಾಭಗಳಿಸಿದ್ದು, ಈ ಲಾಭವನ್ನು ಸಹಕಾರ ಶಿಕ್ಷಣ ನಿಧಿ, ದಾನದ ನಿಧಿ, ಕಟ್ಟಡದ ನಿಧಿ, ಮರಣೋತ್ತರ ನಿಧಿ ಸೇರಿದಂತೆ ಇತರೆಗೆ ವಿಲೇವಾರಿ ಮಾಡಿ ಅನುಮೋದನೆೆಗಾಗಿ ವಾರ್ಷಿಕ ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಹನುಮಾನ್, ಮಾಜಿ ಅಧ್ಯಕ್ಷರಾದ ಕೆ.ವಿ.ಮಂಜುನಾಥ್, ಈಶಪ್ರಸಾದ್, ನಿರ್ದೇಶಕ ಕುಂಬಿ ನರಸಿಂಹಯ್ಯ, ಶಶಿಕಲಾ, ಉಮಾದೇವಿ, ಮುಖಂಡರಾದ ಆನಂದ್, ಗಟ್ಲಹಳ್ಳಿ ಕುಮಾರ್, ವಿ.ಪಿ ಕಾಂತರಾಜು, ಪ.ಪಂ ಸದಸ್ಯ ಪುಟ್ಟನರಸಪ್ಪ, ಸೇರಿದಂತೆ ಸಂಘದ ಎ ತರಗತಿಯ ಸದಸ್ಯರು, ಕಾರ್ಯದರ್ಶಿ ಕೃಷ್ಣಮೂರ್ತಿ, ಗುರು, ನಾಗರಾಜು, ಚೇತನ್ ಸೇರಿದಂತೆ ಇತರರು ಇದ್ದರು
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC