nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೇಶದಲ್ಲಿ ಪ್ರಜಾಪ್ರಭುತ್ವವೋ ಅಥವಾ ತುರ್ತು ಪರಿಸ್ಥಿತಿಯೋ? ಪ್ರಧಾನಿ ಮೋದಿ ಉತ್ತರಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

    October 12, 2026

    ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!

    October 12, 2026

    ಸಿಎಂ ಹುದ್ದೆ ಖಾಲಿ ಇಲ್ಲ, ಸದ್ಯಕ್ಕೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್ ಸ್ಪಷ್ಟನೆ

    October 12, 2026
    Facebook Twitter Instagram
    ಟ್ರೆಂಡಿಂಗ್
    • ದೇಶದಲ್ಲಿ ಪ್ರಜಾಪ್ರಭುತ್ವವೋ ಅಥವಾ ತುರ್ತು ಪರಿಸ್ಥಿತಿಯೋ? ಪ್ರಧಾನಿ ಮೋದಿ ಉತ್ತರಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ
    • ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!
    • ಸಿಎಂ ಹುದ್ದೆ ಖಾಲಿ ಇಲ್ಲ, ಸದ್ಯಕ್ಕೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್ ಸ್ಪಷ್ಟನೆ
    • ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ
    • ಕೆರೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು: ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅರ್ಜುನ್
    • ಅಖಿಲ ಭಾರತ ಪ್ರತಿಭಟನಾ ದಿನ : AIDSO
    • ತುಮಕೂರು ದಸರಾ–2026: ದಸರಾ ಅಂಬಾರಿ ಬಸ್‌ ಗೆ ಚಾಲನೆ
    • ತುಮಕೂರು ದಸರಾ ಹಿಂದಿದೆ ವಿಶೇಷ ಇತಿಹಾಸ ಹಾಗೂ ಉದ್ದೇಶ! ಏನದು ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಟಿಎಪಿಎಂಎಸ್ 2024–25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
    ಕೊರಟಗೆರೆ September 21, 2025

    ಟಿಎಪಿಎಂಎಸ್ 2024–25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

    By adminSeptember 21, 2025No Comments3 Mins Read
    koratagere

    ಕೊರಟಗೆರೆ : ವ್ಯವಸಾಯೋತ್ಪನ ಸಹಕಾರ ಸಂಘವು 1960ನೇ ಇಸವಿಯಲ್ಲಿ ಸ್ಥಾಪನೆಗೊಂಡಿದೆ. ತುಮಕೂರು ಜಿಲ್ಲೆಯ ಇತರೆ ತಾಲ್ಲೂಕಿನ ಸಹಕಾರ ಸಂಘಕ್ಕೆ ಹೋಲಿಕೆ ಮಾಡಿದ್ದಲ್ಲಿ ಇಲ್ಲಿನ ವ್ಯವಸಾಯೋತ್ಪನ ಸಂಘ ಲಾಭದಾಯಕವಾಗಿದೆ ಎಂದು ತಾಲ್ಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ಜಿ.ಎಂ ತಿಳಿಸಿದರು.

    ಕೊರಟಗೆರೆ ತಾಲ್ಲೂಕು ವ್ಯವಯೋತ್ಪನ ಮಾರಾಟ ಸಹಕಾರ ಸಂಘದ ಪ್ರಧಾನ ಕಟ್ಟಡದ ಮೇಲ್ಭಾಗದ ಆವರಣದಲ್ಲಿ ಆಯೋಜಿಸಲಾದ 2024–25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೇರೆ ತಾಲ್ಲೂಕಿನಲ್ಲಿ ಕೆಲವು ಸಂಘಗಳು ಆದಾಯದ ಮೂಲ ಇಲ್ಲದೇ ನಷ್ಠದ ಪರಿಸ್ಥಿತಿಗೆ ಸಿಲುಕಿದೆ. ನಮ್ಮ ತಾಲ್ಲೂಕಿನಲ್ಲಿ ಆದಾಯದ ಮೂಲಗಳನ್ನು ಸೃಷ್ಠಿಸಿ ಸಂಘ ಅಭಿವೃದ್ಧಿ ಹೊಂದಿದೆ.ಈ ನಿರ್ದೇಶಕರು,ಸದಸ್ಯರ ಸಹಕಾರ, ಅತ್ಯಮೂಲ್ಯ ಸಲಹೆಯಿಂದ ಆರ್ಥಿಕವಾಗಿ ಸದೃಢವಾಗಿದೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳಾದ ರೇಣುಕಾ ಮತ್ತು ಕೀರ್ತನಾರಾದ್ಯಗೆ ಪ್ರತಿಭಾ ಪುರಸ್ಕಾರದಲ್ಲಿ ಗೌರವಿಸಲಾಗಿದೆ ಎಂದರು.

     2024–25ನೇ ಸಾಲಿನ ವಾರ್ಷಿಕ ವರದಿ:

    ತಾಲ್ಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘದ 2024-25ನೇ ಸಾಲಿನಲ್ಲಿ ‘ಎ’ ತರಗತಿಯಿಂದ 17 ಸಂಘಗಳು ಸದಸ್ಯತ್ವ ಪಡೆದು 1.82.050 ಲಕ್ಷ.ರೂ ಷೇರು ಬಂಡವಾಳ ಹೂಡಿದೆ, ‘ಬಿ’ ತರಗತಿಯಿಂದ 1773 ಸಂಘ ಸದಸ್ಯತ್ವ ಪಡೆದು 9.12.199 ಲಕ್ಷ.ರೂ ಷೇರು ಬಂಡವಾಳ ಹೂಡಿದ್ದು, ‘ಡಿ’ ತರಗತಿಯಲ್ಲಿ ಆಶಕ್ತರಿಗೆ ಸರ್ಕಾರದಿಂದ 5.53.230 ಲಕ್ಷ.ರೂ ಷೇರು ಬಂಡವಾಳ ಹೂಡಿದ್ದು, ‘ಬಿ’ ತರಗತಿ (ಅಮಾನತ್ತು) 7020.ರೂ ಒಳಗೊಂಡಂತೆ ಒಟ್ಟು 20.83.473 ಲಕ್ಷ ಷೇರು ಬಂಡವಾಳವಾಗಿ ಸಹಕಾರ ಸಂಘದಲ್ಲಿದೆ ಎಂದರು.

    ವರದಿ ಸಾಲಿನಲ್ಲಿ ‘ಎ’ ತರಗತಿ ಷೇರು 92 ಸಾವಿರ ರೂ, ಹಾಗೂ ‘ಬಿ’ ತರಗತಿ ಷೇರು 1.48.238.ರೂ ಸಂಘಕ್ಕೆ ಜಮಾಗೊಂಡಿದೆ. 2025 ಮಾರ್ಚ್ 31ರ ಅಂತ್ಯಕ್ಕೆ 40.82.293.77 ಲಕ್ಷ.ರೂ ಅಪದ್ಧನ ನಿಧಿ ಹಾಗೂ 1.00.56.413 ಕೋಟಿ.ರೂ ನಿಧಿಯಾಗಿದೆ. ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕೊರಟಗೆರೆ ಶಾಖೆ ಹಾಗೂ ಇತರೆ ರಸಗೊಬ್ಬರ ಕಂಪನಿಗಳಲ್ಲಿ ನಿಶ್ಚಿತ ಠೇವಣಿ, ಷೇರು ಕೊಳ್ಳುವುದರ ಮೂಲಕ 81.03.632 ಲಕ್ಷ.ರೂ ಹೂಡಿಕೆ ಮಾಡಿರುತ್ತದೆ.

    ಬಾಡಿಗೆ, ಸಾಲಗಳ ಮೇಲೆ ಬಡ್ಡಿ, ಹೂಡಿಕೆ ಮೇಲೆ ಬಡ್ಡಿ, ಇತರೆ ಆದಾಯ ಮೂಲಗಳಿಂದ ಸಂಘಕ್ಕೆ 33.23.669 ಲಕ್ಷ.ರೂ ಆದಾಯ ಬಂದಿದೆ. 2024 ರ ಮಾರ್ಚ್ ಅಂತ್ಯಕ್ಕೆ 16.72.905 ದಾಸ್ತಾನು ಹೊಂದಿದ್ದು ವರದಿ ಸಾಲಿನಲ್ಲಿ 44.02.329 ಲಕ್ಷ.ರೂ ಗಳಷ್ಟು ದಾಸ್ತಾನು ಖರೀದಿ ಮಾಡಿ 2024–25ನೇ ಸಾಲಿನಲ್ಲಿ 47.72.326 ರೂ ಗಳಷ್ಟು ಮಾರಾಟ ಮಾಡಿರುತ್ತದೆ. ವ್ಯಾಪಾರ ವೆಚ್ಚ ಕಳೆದು 1.72.613 ಲಕ್ಷ.ರೂ ಗಳಷ್ಟು ವ್ಯಾಪಾರ ಲಾಭಗಳಿಸಿದ್ದು, 2025 ಮಾರ್ಚ್ ಅಂತ್ಯಕ್ಕೆ 16.33.281.74 ಲಕ್ಷ.ರೂ ಗಳಷ್ಟು ದಾಸ್ತಾನು ಹೊಂದಿರುತ್ತದೆ.

    ಸಂಘವು ಠೇವಣಾತಿ ನಿಯಮ ರಚಿಸಿಕೊಂಡು ಜಿಲ್ಲಾ ಸಹಕಾರ ಉಪ ನಿಬಂಧಕರಿಂದ ಅನುಮೋದನೆ ಪಡೆದುಕೊಂಡು ಸದಸ್ಯರಿಂದ ಪ್ರತಿನಿತ್ಯ ಪಿಗ್ಮಿ ಠೇವಣಿ  ಸಂಗ್ರಹಿಸಿದ ಮೊತ್ತವನ್ನು ಸದಸ್ಯರುಗಳಿಗೆ ಬಿಡಿಪಿ ಸಾಲ ಹಾಗೂ ದ್ವಿಚಕ್ರ ವಾಹನ ಸಾಲ ನೀಡಿದ್ದು, 50.29.276ಲಕ್ಷ.ರೂ ವ್ಯಾಪಾರ ಸಾಲ ಹಾಗೂ 2.03.000 ರೂ.ಗಳಷ್ಟು ವಾಹನ ಸಾಲ ನೀಡಿದ್ದು, ವ್ಯಾಪಾರದ ಸಾಲದಲ್ಲಿ 49.19.420 ಲಕ್ಷ.ರೂ ಹಾಗೂ ವಾಹನ ಸಾಲ 3.09.271 ರೂ.ಗಳು ಜಮಾ ಬಂದಿದೆ. ವರದಿ ಸಾಲಿನ ಅಂತ್ಯದಲ್ಲಿ ವ್ಯಾಪಾರ ಮತ್ತು ವಾಹನ ಸಾಲ ಬಾಬ್ತು ೮೭.೪೫.೭೩೦ ಲಕ್ಷ.ರೂ. ಸಂಘದ ಸದಸ್ಯರುಗಳಿಂದ ಬರಬೇಕಾದ ಸಾಲವಿರುತ್ತದೆ ಎಂದು ಹೇಳಿದರು.

    ಸದರಿ ಸಾಲಿನ ವಾರ್ಷಿಕದಲ್ಲಿ ಸಂಘವು 3.62.221 ಲಕ್ಷ.ರೂ ಗಳನ್ನು ಆದಾಯ ತೆರಿಗೆ ಪಾವತಿ ಮಾಡಿದ್ದು, ಬಾಕಿ ನಿಂತ ಕಂದಾಯ 5.77.783 ಲಕ್ಷ.ರೂ ಪಟ್ಟಣ ಪಂಚಾಯ್ತಿಗೆ ಪಾವತಿ ಮಾಡಿದೆ. 2024–25ನೇ ಸಾಲಿಗೆ 14.51.570 ಲಕ್ಷ.ರೂ. ನಿವ್ವಳ ಲಾಭಗಳಿಸಿದ್ದು, ಈ ಲಾಭವನ್ನು ಸಹಕಾರ ಶಿಕ್ಷಣ ನಿಧಿ, ದಾನದ ನಿಧಿ, ಕಟ್ಟಡದ ನಿಧಿ, ಮರಣೋತ್ತರ ನಿಧಿ ಸೇರಿದಂತೆ ಇತರೆಗೆ ವಿಲೇವಾರಿ ಮಾಡಿ ಅನುಮೋದನೆೆಗಾಗಿ ವಾರ್ಷಿಕ ಸಭೆಯಲ್ಲಿ ಮಂಡಿಸಿದರು.

    ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಹನುಮಾನ್, ಮಾಜಿ ಅಧ್ಯಕ್ಷರಾದ ಕೆ.ವಿ.ಮಂಜುನಾಥ್, ಈಶಪ್ರಸಾದ್, ನಿರ್ದೇಶಕ ಕುಂಬಿ ನರಸಿಂಹಯ್ಯ, ಶಶಿಕಲಾ, ಉಮಾದೇವಿ, ಮುಖಂಡರಾದ ಆನಂದ್, ಗಟ್ಲಹಳ್ಳಿ ಕುಮಾರ್, ವಿ.ಪಿ ಕಾಂತರಾಜು, ಪ.ಪಂ ಸದಸ್ಯ ಪುಟ್ಟನರಸಪ್ಪ, ಸೇರಿದಂತೆ ಸಂಘದ ಎ ತರಗತಿಯ ಸದಸ್ಯರು, ಕಾರ್ಯದರ್ಶಿ ಕೃಷ್ಣಮೂರ್ತಿ, ಗುರು, ನಾಗರಾಜು, ಚೇತನ್ ಸೇರಿದಂತೆ ಇತರರು ಇದ್ದರು

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ

    October 4, 2026

    ಹೈನುಗಾರಿಕೆ ಪ್ರೋತ್ಸಾಹಿಸಲು ರೈತರಿಗೆ ಉಚಿತ ಮೇವಿನ ಬೀಜ ವಿತರಣೆ: ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಪಶುಪಾಲನಾ ಇಲಾಖೆಯಿಂದ ರೈತಸ್ನೇಹಿ ಹೆಜ್ಜೆ

    October 3, 2026

    ಗಾಂಧಿ ಜಯಂತಿ ಪ್ರಯುಕ್ತ ಶ್ರೀಕ್ಷೇತ್ರ ಸಿದ್ದರಬೆಟ್ಟದಲ್ಲಿ ಸ್ವಚ್ಛತಾ ಆಂದೋಲನ

    October 2, 2026

    Comments are closed.

    Our Picks

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    ನಾನಾ ಪಾಟೇಕರ್ ಸಾವಿಗೆ ನಿಜ ಕಾರಣ ಏನು? ಮರಣೋತ್ತರ ಪರೀಕ್ಷೆ ವರದಿ ಬಯಲು!

    October 11, 2026

     CJP ನಾಯಕರ ವಶಕ್ಕೆ ಪುರುಷ ಪೋಲಿಸರ  ಮಹಿಳಾ ಪೊಲೀಸರ ಎಂಟ್ರಿ ಹಿಂದಿನ ಕಾರಣವೇನು?

    October 11, 2026

    ಬೀದರ್‌: ರಾಷ್ಟ್ರೀಯ ಭೀಮ್ ರಾಜ್ ಸೇನಾ ಅಧ್ಯಕ್ಷ ರಾಜೇಶ್‌ ಕಾಂಬ್ಳೆಗೆ ಸನ್ಮಾನ

    October 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ದೇಶದಲ್ಲಿ ಪ್ರಜಾಪ್ರಭುತ್ವವೋ ಅಥವಾ ತುರ್ತು ಪರಿಸ್ಥಿತಿಯೋ? ಪ್ರಧಾನಿ ಮೋದಿ ಉತ್ತರಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

    October 12, 2026

    ಮೈಸೂರು: ದೇಶದಲ್ಲಿ ಪ್ರಜಾಪ್ರಭುತ್ವವಿದೆಯೇ ಅಥವಾ ತುರ್ತು ಪರಿಸ್ಥಿತಿಯೇ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಉತ್ತರ ನೀಡಬೇಕು…

    ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಣೆಗೆ ಹೋಗಿದ್ದ ಕುಟುಂಬಕ್ಕೆ ಶಾಕ್; ಮಂಚದ ಕೆಳಗೆ ಅವಿತಿದ್ದ ಕಳ್ಳ ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ!

    October 12, 2026

    ಸಿಎಂ ಹುದ್ದೆ ಖಾಲಿ ಇಲ್ಲ, ಸದ್ಯಕ್ಕೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್ ಸ್ಪಷ್ಟನೆ

    October 12, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.