ಸ್ಯಾಂಡಲ್ ವುಡ್ ನಿರ್ದೇಶಕ ತರುಣ್ ಸುಧೀರ್ ಹಾಗೂ ತುಳುನಾಡಿ ನಟಿ ಸೋನಲ್ ಮೊಂಥೆರೋ ಅವರ ವಿವಾಹ ಕಾರ್ಯಕ್ರಮ ಹಿಂದೂ ಸಂಪ್ರದಾಯದಂತೆ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಇಂದು ನಡೆಯಿತು.
ಈ ವಿವಾಹ ಕಾರ್ಯಕ್ರಮದಲ್ಲಿ ಸಿನಿತಾರೆಯರ ದಂಡೇ ಪಾಲ್ಗೊಂಡಿತ್ತು. ಅಲ್ಲದೇ ನಾನಾ ಪಕ್ಷಗಳ ರಾಜಕೀಯ ನಾಯಕರು ಕೂಡ ಭಾಗಿಯಾಗಿದ್ದರು.
ಹಿರಿಯ ನಟಿ ಗಿರಿಜಾ ಲೋಕೇಶ್, ಸುಧಾರಾಣಿ, ಮಾಳವಿಕಾ ಹಾಗೂ ಅವಿನಾಶ್, ಯೋಗಿ ದ್ವಾರಕೀಶ್, ರಾಕ್ ಲೈನ್ ವೆಂಕಟೇಶ್ ವಿಶೇಷವಾಗಿ ಟಾಲಿವುಡ್ನ ನಟ ಜಗಪತಿ ಬಾಬು ಈ ಜೋಡಿಗೆ ಶುಭ ಹಾರೈಸಿದರು.
ಖ್ಯಾತ ಗಾಯಕ ವಿಜಯ್ ಪ್ರಕಾಶ್ , ರವಿಚಂದ್ರನ್ ಸಹೋದರ ಬಾಲಾಜಿ, ಸಾಧು ಕೋಕಿಲ, ತನಿಷಾ ಕುಪ್ಪಂಡ, ನಿರೂಪಕ ನಿರಂಜನ್ ದೇಶಪಾಂಡೆ, ನಟ–ನಿರ್ದೇಶಕ ರಘು ರಾಮ್, ಗೋಲ್ಡನ್ ಸ್ಟಾರ್ ಗಣೇಶ್, ತಾರಾ ಅನುರಾಧಾ, ವಿನೋದ್ ರಾಜ್, ಮೇಘನಾ ಗಾಂವ್ಕರ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ವಧುವರರಿಗೆ ಶುಭ ಹಾರೈಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


