ಪಾವಗಡ: ತಾಲೂಕಿನ ನಾಗಲಮಡಿಕೆ ಗ್ರಾಮದ ಅಂತ್ಯ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ, ಬರ ಪರಿಹಾರದ ಯೋಜನೆಗಳಲ್ಲಿ ಒಂದಾದ ಮೇವು ವಿತರಣಾ ಬ್ಯಾಂಕ್ ಗೆ ಮೇವಿನ ಒರೆಯನ್ನು, ರೈತರಿಗೆ ವಿತರಿಸುವ ಮೂಲಕ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪಾವಗಡ ತಾಲೂಕನ್ನು ಈಗಾಗಲೇ ಬರಪೀಡಿತ ಪ್ರದೇಶ ಎಂದು ಘೋಷಿಸಿಲಾಗಿದೆ. ಅದೇ ರೀತಿ ಪಾವಗಡ ತಾಲೂಕಿನಲ್ಲಿ ಮೊದಲನೆಯ ಮೇವು ಬ್ಯಾಂಕನ್ನು ನಾಗಲಮಡಿಕೆ ಗ್ರಾಮದಲ್ಲಿ ತೆರೆಯಲಾಗಿದ್ದು, ರೈತರು ಇದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ವೈ ಎನ್ ಹೊಸಕೋಟೆಯಲ್ಲಿ ಎರಡನೇ ಹಂತದ ಮೇವಿನ ಬ್ಯಾಂಕ್ ತೆರೆಯಲಾಗುವುದು” ಎಂದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಹೋರಕೇರಪ್ಪ ಅವರು ಮಾತನಾಡಿ, “ಈಗಾಗಲೇ ಮೇವಿನ ಕೊರತೆ ಇರುವವಂತಹ ರೈತರನ್ನು ಗುರುತಿಸಿ, ನಮ್ಮ ಇಲಾಖೆಯಿಂದ ಅವರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಒಂದು ರಾಸುವಿಗೆ ದಿನಕ್ಕೆ ಆರು ಕೆಜಿಯಂತೆ, ಏಳು ದಿನಗಳಿಗೆ 42 ಕೆಜಿ ಮೇವನ್ನು ಪ್ರತಿ ಕೆಜಿಗೆ ಎರಡು ರೂಪಾಯಿಯಂತೆ ಹಣವನ್ನು ಪಡೆದು ವಿತರಿಸಲಾಗುತ್ತದೆ” ಎಂದರು.
ಈ ಸಂದರ್ಭದಲ್ಲಿ ನಾಗಲಮಡಿಕೆ ಆರ್.ಐ. ನಾರಾಯಣಸ್ವಾಮಿ, ಉಪ ತಾಹಸೀಲ್ದಾರ್ ಕೆ.ರಾಜಣ್ಣ, ಆಸೀಪ್, ಅಶ್ವತ್ ನಾರಾಯಣ, ಸಿಬ್ಬಂದಿ ಸೌಮ್ಯ, ರಾಮಾಂಜಿನೇಲು, ನಾಗಮ್ಮ, ಶಿವರಾಜಪ್ಪ, ದಿನೇಶ್, ತಿಪ್ಪೇಸ್ವಾಮಿ, ಸಣ್ಣಿರಪ್ಪ, ಸೇರಿದಂತೆ ಹಲವರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


