ರಾಯಬಾಗ: ಚುನಾವಣಾ ಸಮೀಪಿಸುತ್ತಿದ್ದಂತೆ ಈಗ ಎಲ್ಲೆಡೆ ಗಿಫ್ಟ್ ಪಾಲಿಟಿಕ್ಸ್ ತಾರಕಕ್ಕೇರುತ್ತಿದೆ. ಒಂದೆಡೆ ಪ್ರಾಮಾಣಿಕತೆಯ ಮಂತ್ರ, ಇನ್ನೊಂದೆಡೆ ಆಮಿಷದ ತಂತ್ರ ಮುಂದುವರಿದಿದೆ. ಹೊಸಹೊಸ ಆಕಾಂಕ್ಷಿಗಳು ತಮ್ಮ ಜಾಗ ಭದ್ರಪಡಿಸಿಕೊಳ್ಳಲು ಹೈ ಕಮಾಂಡ್ ಪಾದಪೂಜೆಯ ಜೊತೆಜೊತೆಗೇ ಜನರ ನಿಯತ್ತನ್ನೇ ಹಾಳುಗೆಡವುತ್ತಿದ್ದಾರೆ. ಇದೀಗ ರಾಯಬಾಗ ಕ್ಷೇತ್ರದಲ್ಲಿ ನಡೆದ ವಿದ್ಯಮಾನವೊಂದು ಯಾರು ಪ್ರಾಮಾಣಿಕರು? ಅಧಿಕಾರ ಮುಖ್ಯವೋ, ಪ್ರಾಮಾಣಿಕತೆ ಮುಖ್ಯವೋ ಎಂಬೆಲ್ಲ ವಿಷಯಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತಮಿಳುನಾಡು ಸರಕಾರದ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಮತದಾರರಿಗೆ ಆಮಿಷವೊಡ್ಡಿರುವ ಘಟನೆ ರಾಯಬಾಗ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿ ನಡೆದಿದೆ. ಇದಕ್ಕಾಗಿಯೇ ಅವರು ಜೋಡಟ್ಟಿ ಗ್ರಾಮದಲ್ಲಿ ಕಲ್ಲೋಳಿಕರ ತೋಟದಲ್ಲಿ ಬಾವಿ ಪೂಜೆ ಹಾಗೂ ಸುಮಂಗಲಿಯರ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಿಸೀರೆಗಳನ್ನು ಹಂಚಲು ಮುಂದಾಗಿದ್ದಾರೆ. ಈ ವಿಷಯ ಒಬ್ಬರಿಂದೊಬ್ಬರಿಗೆ ಹರಡಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಹಿಳಾ ಮಣಿಗಳು ಸೀರೆಗಾಗಿ ಮುಗಿಬಿದ್ದಿದ್ದಾರೆ.
ಇದ್ದ ಸೀರೆ ಲೆಕ್ಕಕ್ಕೂ ಬಂದ ಮಹಿಳೆಯರ ಲೆಕ್ಕಕ್ಕೂ ತಾಳಮೇಳವಾಗದೇ ತಬ್ಬಿಬ್ಬಾದ ಶಂಭು ಕಲ್ಲೋಳಿಕರ ಮಹಿಳೆಯರ ಆಗಮನ ನಿಯಂತ್ರಿಸಲಾಗದೆ ಸೀರೆ ಹಂಚಿಕೆ ಸ್ಥಗಿತಗೊಳಿಸಿದ್ದಾರೆ. ಮಹಿಳೆಯರ ಈ ನೂಕುನುಗ್ಗಲಿನ ಮಧ್ಯೆ ಕಾಲ್ತುಳಿದ ಘಟನೆಯಲ್ಲಿ ಮೂರ್ನಾಲ್ಕು ಮಹಿಳೆಯರು ಗಾಯಗೊಂಡಿದ್ದಾರೆ. ಸೀರೆ ಸಿಗದ ನೀರೆಯರೆಲ್ಲ ನಿಗಿನಿಗಿ ಕೆಂಡದಂಥ ಕೋಪ ಕಾರುತ್ತ ಮನೆಯತ್ತ ಹೆಜ್ಜೆ ಹಾಕಿದರು. ಮಹಿಳೆಯರು ಆದರೆ ದಕ್ಷ ಅಧಿಕಾರಿ ಎಂದು ಹೇಳಿಕೊಂಡು ಇಂಥ ಕಾನೂನು ಬಾಹಿರ ಕೆಲಸಗಳೊಂದಿಗೆ ರಾಜಕೀಯಕ್ಕೆ ಇಳಿದ ಶಂಭು ಕಲ್ಲೋಳಕರ ಅವರ ಬಗ್ಗೆ ವಿಪರೀತ ಟೀಕೆಗಳು ವ್ಯಕ್ತವಾಗುತ್ತಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA