ಕೊರಟಗೆರೆ: ಕಾಂಗ್ರೆಸ್ ಪಕ್ಷದ ರಾಷ್ಟೀಯ ಮಹಿಳಾ ಸಮಾವೇಶಕ್ಕೆ ತುಮಕೂರು ಜಿಲ್ಲೆಯಿಂದ ಮಹಿಳಾ ಪದಾಧಿಕಾರಿಗಳ ದೆಹಲಿ ಪ್ರಯಾಣಕ್ಕೆ ಎಲ್ಲಾ ರೀತಿ ಅನುಕೂಲ ಮಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ರವರಿಗೆ ಕೊರಟಗೆರೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಮ್ಮ ಧನ್ಯವಾದ ತಿಳಿಸಿದರು.
ಇತ್ತೀಚೆಗೆ ದೆಹಲಿಯ ನೆಹರು ಭವನದಲ್ಲಿ ಐದು ದಿನಗಳ ಕಾಲ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅದ್ಯಕ್ಷರುಗಳ ಪದಾಧಿಕಾರಿಗಳ ತರಬೇತಿ ಮತ್ತು ಸಂಮೇಳನ ನಡೆದ್ದಿತ್ತು, ಈ ಬೃಹತ್ ಸಮಾರಂಭಕ್ಕೆ ವಿವಿಧ ರಾಜ್ಯಗಳ ಪಕ್ಷ ಮಹಿಳೆಯರು ಭಾಗವಹಿಸಿದ್ದರು, ಕರ್ನಾಟಕದ ರಾಜ್ಯದ ಸುಮಾರು ೬೦೦ ಮಹಿಳಾ ಪದಾಧಿಕಾರಿಗಳು ಅದರಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದಿಂದ ೧೯ ಮಹಿಳಾ ಘಟಕದ ಮುಂಚಿಣಿ ಘಟಕದವರು ದೆಹಲಿಗೆ ತೆರಳಿ ಸಂಮ್ಮೇಳನದಲ್ಲಿ ಭಾಗವಹಿಸಿ ಬಂದ್ದಿದ್ದರು, ಈ ಪ್ರಯಾಣಕ್ಕೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ರವರು ಎಲ್ಲಾ ತರಹದ ಅನುಕೂಲ ಮಾಡಿ ಕಳುಹಿಸಿದ ಹಿನ್ನೆಲೆಯಲ್ಲಿ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷೆ ಜಯಮ್ಮ ಸಚಿವರಿಗೆ ದೆಹಲಿಯಿಂದ ಪೆನ್ನ್ನು ಕೊಡುಗೆಯಾಗಿ ನೀಡಿ ಮಹಿಳೆಯರು ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಜಯಮ್ಮರೊಂದಿಗೆ ಪಕ್ಷದ ತಾಲ್ಲೂಕಿನ ಮಹಿಳಾ ಪದಾಧಿಕಾರಿಗಳು ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವಥನಾರಾಯಣ, ಅರಕೆರೆ ಶಂಕರ್ ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


