ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಚಿಕನ್ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಬೆಲೆ ಕೇಳಿ ಗ್ರಾಹಕರು ದಂಗಾಗಿದ್ದಾರೆ. ಇಷ್ಟು ದಿನ ತರಕಾರಿಗಳ ಬೆಲೆ ಏರಿಕೆಯಾಗಿತ್ತು. ಇದೀಗ ಹವಮಾನ ವೈಪರಿತ್ಯದಿಂದ ಮಾಂಸ ಮತ್ತು ಮೊಟ್ಟೆ ಬೆಲೆ ಕೂಡ ಹೆಚ್ಚಳವಾಗಿದೆ. ಕೆಜಿ ಚಿಕನ್ಗೆ 380 ರೂ ಆಗಿದೆ. ಕೆಜಿ ಮಟನ್ಗೆ 800 ರೂ. ಆಗಿದ್ದು, ಮೊಟ್ಟೆಗೆ 8 ರಿಂದ 7 ರೂ. ನಿಗದಿ ಮಾಡಲಾಗಿದೆ. ಬೇಸಿಗೆ ಇದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕೋಳಿ ಸಾಕಾಣೆಯಾಗಿಲ್ಲ. ಇದೀಗ ಬೇಡಿಕೆ ಜಾಸ್ತಿಯಾಗಿದೆ.
ಬೇಡಿಕೆಗೆ ತಕ್ಕಷ್ಟು ಕೋಳಿ ಮಾಂಸದ ಪೂರೈಕೆ ಇಲ್ಲದ ಕಾರಣ ಮಾಂಸಾಹಾರ ಬೆಲೆ ಕೂಡ ಏರಿಕೆಯಾಗಿದೆ. ಅಲ್ಲದೆ ಮದುವೆ ಸೀಜನ್ ನಲ್ಲಿ ಮಾಂಸಾಹಾರಕ್ಕೂ ಹೆಚ್ಚು ಬೇಡಿಕೆ ಇರುವುದರಿಂದ, ಮುಂದಿನ ಒಂದು ತಿಂಗಳವರೆಗೂ ಮಾಂಸದ ಬೆಲೆ ಹೆಚ್ಚಾಗಲಿದೆ ಎಂದು ಮಾಂಸ ವ್ಯಾಪಾರಿ ಉಬೇದ್ ಉಲ್ಲಾ ಖಾನ್ ಹೇಳಿದ್ದಾರೆ. ತರಕಾರಿ ಬೆಲೆ ಹೆಚ್ಚಾಗಿದೆ.
ಇದೀಗ ಮಾಂಸದ ಬೆಲೆಯೂ ಏರಿಕೆಯಾಗಿದೆ. ಇಷ್ಟೊಂದು ಬೆಲೆ ಏರಿಕೆಯಾದರೆ ಮಾಂಸವನ್ನು ತಿನ್ನುವುದಾದರೂ ಹೇಗೆ?. ಭಾನುವಾರ ಬಂದರೆ ಸಾಕು ಮನೆಯಲ್ಲಿ ಮಾಂಸಾಹಾರ ಇರಲೇ ಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಟ್ಟೆಯನ್ನು ಪ್ರತಿದಿನ ಕೊಡಬೇಕಾಗುತ್ತದೆ. ಆದರೆ ಮೊಟ್ಟೆಯ ಬೆಲೆ 7 ರೂಪಾಯಿ ಆಗಿದೆ. ಮಟನ್ ಬೆಲೆ ಸಾವಿರದ ಗಡಿ ತಲಪುತ್ತಿದೆ. ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಶಾಕ್ ಆಗಿದ್ದು, ಇನ್ನೂ ಒಂದು ತಿಂಗಳು ಕಾಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


