ತುಮಕೂರು: ತೆಂಗಿನ ನಾರಿನ ಫ್ಯಾಕ್ಟರಿಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದೆ.
ತುಮಕೂರು ರಸ್ತೆಯಲ್ಲಿರುವ ದೊಡ್ಡ ಮಲ್ಲಿಗೆರೆ ಗೇಟ್ ಬಳಿ ಭೂ ಮಾಲೀಕರಾದ ಹನುಮಂತರಾಜು ಎಂಬುವರಿಗೆ ಸೇರಿದ ಜಾಗದಲ್ಲಿ, ಸುಮಾರು ಮೂರು ಎಕರೆ ಜಾಗದಲ್ಲಿ, ಮೂರ್ನಾಲ್ಕು ಜನ ಷೇರುದಾರರ ಮಾಲೀಕತ್ವದಲ್ಲಿ ಈ ತೆಂಗಿನ ನಾರಿನ ಫ್ಯಾಕ್ಟರಿ ನಡೆಯುತ್ತಿತ್ತು.
ನಿನ್ನೆ ಮಧ್ಯಾಹ್ನ ಸುಮಾರು 2 ರಿಂದ 3:30 ರ ಸಮಯದಲ್ಲಿ ಅಗ್ನಿ ಅವಘಡದಿಂದ ಒಂದು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.

ಕೆಲವು ಮೂಲಗಳ ಪ್ರಕಾರ ಕೀಡಿಗೇಡಿಗಳು ಫ್ಯಾಕ್ಟರಿಯಿಂದ ಸುಮಾರು 500 ಮೀಟರ್ ದೂರದಲ್ಲಿ ಮಧ್ಯಾಹ್ನ ಧೂಮಪಾನ ಮಾಡಿ ಬೆಂಕಿ ಕಿಡಿಯನ್ನು ಬೀಳಿಸಿದರ ಪರಿಣಾಮ ಈ ಅಗ್ನಿ ಅವಘಡ ನಡೆದಿದೆ ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಅಧಿಕಾರಿಗಳು ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾದರೂ ಯಾವುದೇ ಪ್ರಯೋಜನವಾಗಿಲ್ಲ. ತೆಂಗಿನ ನಾರಿನ ಫ್ಯಾಕ್ಟರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಿಂದಾಗಿ ಫ್ಯಾಕ್ಟರಿಯ ಮಾಲೀಕರು ಭಾರೀ ನಷ್ಟ ಅನುಭವಿಸುವಂತಾಗಿದೆ.
ಫ್ಯಾಕ್ಟರಿ ಬಳಿ ಇದ್ದ ಫ್ಯಾಕ್ಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಿಂದ ಮತ್ತು ಅಕ್ಕಪಕ್ಕದ ಜಮೀನನ ಮಾಲೀಕರು ಸುತ್ತಮುತ್ತಲಿನ ಊರಿನ ಗ್ರಾಮಸ್ಥರುಗಳು ಸಹ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


