ಬೀದರ್: 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ತಂಬಾಕು ಪದಾರ್ಥ ಮತ್ತು ಮಿಕ್ಸ್ ಮಾಡುವ ಖಂಡಿ ವಸ್ತುಗಳ ಪ್ಯಾಕೇಟ್ ಹಾಗೂ ಲಾರಿ ಸಹಿತ ಆರೋಪಿಯನ್ನು ಬೀದರ್ ಜಿಲ್ಲಾ ಹಳ್ಳಿಖೇಡ್ –ಬಿ ಪೊಲೀಸರು ಬಂಧಿಸಿದ್ದಾರೆ.
ಹುಮನಾಬಾದ ತಾಲೂಕಿನ ಕಬೀರಾಬಾದವಾಡಿ ಕ್ರಾಸ್ ಹತ್ತಿರ ಲಾರಿಯೊಂದರಲ್ಲಿ ಅಕ್ರಮವಾಗಿ ಜರ್ದಾ ತಂಬಾಕು ಮತ್ತು ತಂಬಾಕಿನಲ್ಲಿ ಮಿಕ್ಸ್ ಮಾಡುವ ಖಂಡಿ ಪದಾರ್ಥಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಹಳ್ಳಿಖೇಡ್–ಬಿ ಪೊಲೀಸ್ ಠಾಣೆಯ ಪಿ.ಎಸ್.ಐ ಅಯ್ಯಪ್ಪ , ಇಕೇಶ, ಕರಿಲಿಂಗಪ್ಪ ಇವರನ್ನೊಳಗೊಂದ ತಂಡ ದಾಲಿ ನಡೆಸಿ ಲಾರಿಯನ್ನು ವಶಕ್ಕೆ ಪಡೆದು, ಜರ್ದಾ ತಂಬಾಕು ಪಾಕೇಟ್ ಮತ್ತು ತಂಬಾಕುವಿನಲ್ಲಿ ಮಿಕ್ಸ್ ಮಾಡುವ ವಸ್ತು ಖಂಡಿ ಹೀಗೆ ಒಟ್ಟು 18,20,000 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ತಂಬಾಕು ಪದಾರ್ಥಗಳನ್ನು ಸಾಗಿಸಲಾಗುತ್ತಿತ್ತು.
ವರದಿ: ಅರವಿಂದ ಮಲ್ಲಿಗೆ, ಬೀದರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296