ಡ್ರಗ್ಸ್ ಮಾರಾಟ ಮಾಡುತ್ತಿದ್ದ ತೋಹಿದ್ ಖಾನ್ (24), ಮೊಹಮ್ಮದ್ ಫಾರೂಕ್ ಶರೀಫ್ (22) ಎಂಬ ಆರೋಪಿಗಳನ್ನು ಸಂಪಿಗೆಹಳ್ಳಿ ಪೋಲಿಸರು ಬಂಧಿಸಿದ್ದಾರೆ.
ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಮೇನಹಳ್ಳಿ – ಅಗ್ರಹಾರ ಗ್ರಾಮದ ರಸ್ತೆಯಲ್ಲಿ, ನಿಷೇಧಿತ ಮಾದಕ ವಸ್ತು ಎಂಎಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ 72 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ಸ್, ಮೂರು ದೊಡ್ಡ ಕತ್ತಿಗಳು, ಒಂದು ಡ್ಯಾಗರ್, ಒಂದು ಸ್ಯಾಂಟ್ರೊ ಕಾರನ್ನು ವಶಪಡಿಸಿಕೊಳ್ಳಲಾಗಿದೆ.


