ಬೆಂಗಳೂರು: ನಾಯಿ ಕಚ್ಚಿದಕ್ಕೆ ದೂರು ನೀಡಿದವರ ಬೈಕ್ ಗಳಿಗೆ ಬೆಂಕಿ ಹಚ್ಚಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಾಯಿ ಮಾಲೀಕನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.
ನಂಜುಂಡಬಾಬು ಬಂಧಿತ ಆರೋಪಿ. ಕೊತ್ತನೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯ ಮನೆಯಲ್ಲಿ ಘಟನೆ ನಡೆದಿದೆ. ಇದೇ ತಿಂಗಳ 23ರಂದು ಘಟನೆ ನಡೆದಿತ್ತು.
ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಮಹಿಳೆಗೆ ನಾಯಿ ಕಚ್ಚಿತ್ತು. ಈ ಸಂಬಂಧ ಮಹಿಳೆ, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಕೊಟ್ಟವರ ಸುಮ್ಮನೆ ಬಿಡುವುದಿಲ್ಲ ಎಂದು ನಾಯಿ ಮಾಲೀಕ ಬೆದರಿಕೆ ಹಾಕಿದ್ದನಂತೆ.


