ಆಂಧ್ರಪ್ರದೇಶ: ಲೋಕಸಭಾ ಚುನಾವಣೆ ಕಣ ದೇಶಾದ್ಯಂತ ರಂಗೇರಿದ್ದು ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಸಂಭ್ರಮಾಚರಣೆಗಳು ಜೋರಾಗಿವೇ. ಟಿಕೆಟ್ ಸಿಕ್ಕಿದ್ದು ಚುನಾವಣೆ ಗೆದ್ದಂತೆ ಎನ್ನುವ ರೀತಿ ಅಭ್ಯರ್ಥಿಗಳು ಭಾವೋದ್ವೇಗಕ್ಕೆ ಒಳಗಾದ ಘಟನೆಗಳೂ ನಡೆದಿವೆ.
ಅದರಂತೆ ಆಂಧ್ರಪ್ರದೇಶದ ನರಸಾಪುರಂ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಭೂಪತಿ ರಾಜು ಶ್ರೀನಿವಾಸ್ ಹೆಸರು ಘೋಷಣೆಯಾಗಿದ್ದು, ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ಪಕ್ಷದ ಕಚೇರಿ ಎದುರು ಮಲಗಿ ಕಣ್ಣೀರಿಟಿದ್ದಾರೆ.
30 ವರ್ಷಗಳಿಂದ ಈ ಕ್ಷಣಕ್ಕಾಗಿ ಕಾದಿದ್ದೇ, ಇಂದು ಆ ಘಳಿಗೆ ಬಂದಿದೆ ಎನ್ನುತ್ತಾ ಪಕ್ಷದ ಕಚೇರಿ ಎದುರಿನ ಕಮಲ ಚಿತ್ರದ ಮೇಲೆ ಬೋರಲು ಮಲಗಿ ಭೂಪತಿ ರಾಜು ಶ್ರೀನಿವಾಸ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತನ್ನ ಮೇಲೆ ಭರವಸೆ ಇಟ್ಟು ಲೋಕಸಭಾ ಟಿಕೆಟ್ ನೀಡಿದ್ದಕ್ಕೆ ವರಿಷ್ಟರಿಗೆ ಧನ್ಯವಾದ ಕೂಡ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296