ಕೊರಟಗೆರೆ: ಕರ್ನಾಟಕ ಸೇರಿದಂತೆ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿರುವ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ ಇದು ಪ್ರಜಾ ಪ್ರಭುತ್ವಕ್ಕೆ ವಿರುದ್ದವಾದ ಅಜೆಂಡಾವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದರು.
ಕೊರಟಗೆರೆ ಪಟ್ಟಣದ ರಾಜೀವ ಭವನದಲ್ಲಿ ಪಕ್ಷದ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರ ಜೋತೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಕ್ಕೆ ಬರ ಪರಿಹಾರ ಅನುದಾನ ಹಂಚಿಕೆ, ಯೋಜನೆ ನೀಡುವುದರಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಅವರು ಹೇಳಿದರು.ದೇಶದಲ್ಲಿ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರು ಜನರ ಸಂಕಷ್ಠಕ್ಕೆ ಈವರೆಗೂ ಸ್ಪಂದಿಸಿಲ್ಲ, ಅನುದಾನ ನಿಡುವಂತೆ ಸುಪ್ರೀಂ ಕೋರ್ಟ್ ಮೋರೆ ಹೋಗಬೇಕಾದ ಪರಿಸ್ಥತಿ ಬಂದಿದೆ ಇದು ಒಳ್ಳೆಯ ಬೆಳವಣೆಗೆಯಲ್ಲ. ಜನರು ಬಿಜೆಪಿ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆಡುವ ಮಾತುಗಳು ಗಮನಿಸಿದರೆ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎನಿಸುತ್ತದೆ.
ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಸಜ್ಜನರಾಜಕಾರಣೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್ತಲ್ಲಿ ಧ್ವನಿ ಎತ್ತಿದವರು, ಬಿಜೆಪಿಯ ಅಭ್ಯರ್ಥಿ ಸೋಮಣ್ಣ ತುಮಕೂರಿನವರಲ್ಲ ಪಕ್ಷದ ಮುಖಂಡರು ಹೊರಗಿನವರನ್ನು ಆಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಸಂಸದ ಬಸವರಾಜು ಅವರು ಸಂಸತ್ತನಲ್ಲಿ ಒಮ್ಮೆಯು ರಾಜ್ಯದ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಇನ್ನಿತ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ ಹೊರಗಿನವರನ್ನು ಗೆಲ್ಲಿಸಿದರೆ ಯಾವ ಕೆಲಸ ಮಾಡಲು ಸಾಧ್ಯವಿಲ್ಲ ಸದಾ ಜನಜರ ಪರವಾಗಿ ನಿಲ್ಲುವ ಮುದ್ದಹನುಮೇಗೌಡರನ್ನು ಜನ ಗೆಲ್ಲಿಸಲ್ಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಭ್ರಷ್ಟ ಎಂದು ಪಕ್ಷದಿಂದ ದೂರ ಇಟ್ಟಿದ್ದ ಜನಾರ್ಧನ ರೆಡ್ಡಿಯನ್ನು ಈಗ ಹೇಗೆ ಪಕ್ಷಕ್ಕೆ ಸೇರಿಸಿಕೊಂಡರು, ಇಂತಹ ನೂರಾರು ಪ್ರಕರಣಗಳು ಬಿಜೆಪಿ ಪಕ್ಷದವರಿಂದ ನಡೆದಿದೆ ಬಿಜೆಪಿಯು ವಾಷಿಂಗ್ ಮೆಷಿನ್ ನಂತೆ ಕೆಲಸ ಮಾಡುತ್ತಿದೆ ಎಂದು ವಿಶ್ಲೇಷಿಸಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಸೋಮಣ್ಣನವರು ನಮ್ಮ ಪಕ್ಷದಲ್ಲಿದ್ದಾಗ ವಿಧಾನಸೌಧದಲ್ಲಿ ನನ್ನ ಪಕ್ಕ ಕುಳಿತುಕೊಳ್ಳುತ್ತಿದ್ದರು ಏಕಾಏಕಿ ಪಕ್ಷ ಬದಲಾಯಿಸಿದರು ರಾಜಕಾರಣ ಬೇರೆ ಸ್ನೇಹವೇ ಬೇರೆ ಸ್ನೇಹ ಇದರೆ ಮನೆಗೆ ಕರದೊಯ್ದು ಊಟ ಹಾಕಿಸಬಹುದು ಅದಕ್ಕಿಂತ ಹೆಚ್ಚಿಗೆ ಏನು ಮಾಡಲಾಗುವುದಿಲ್ಲ ನಮಗೆ ಪಕ್ಷದ ಸಿದ್ದಾಂತ ಮುಖ್ಯ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಸ್..ಪಿ.ಮುದ್ದಹನುಮೇಗೌಡ ಅವರು ಏಪ್ರಿಲ್ 4 ರಂದು ಬೆಳಗ್ಗೆ 10-30 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಕಾರ್ಯಕ್ರಮದಲ್ಲಿ ಜನರು ಭಾಗವಹಿಸುವ ಮೂಲಕ ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿಸಬೇಕು ಎಂದು ಕಾರ್ಯಕರ್ತರಿಗೆ ಕೆರೆ ನೀಡಿದರು.
ವರದಿ: ಮಂಜುಸ್ವಾಮಿ ಎಂ ಎನ್ ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


