ಚಾಮರಾಜನಗರ: ಸ್ನಾನಕ್ಕೆಂದು ಇಟ್ಟಿದ್ದ ಬಿಸಿ ನೀರನ್ನು ಮಗುವೊಂದು ಮೈಮೇಲೆ ಸುರಿದುಕೊಂಡ ಪರಿಣಾಮ ಮಗು ಸಾವನ್ನಪ್ಪಿರುವ ದುರಂತ ಘಟನೆ ಚಾಮರಾಜನಗರ ಜಿಲ್ಲೆಯ ಸತ್ತೇಗಾಲ ಗ್ರಾಮದಲ್ಲಿ ಜರುಗಿದೆ. ಘಟನೆಯಲ್ಲಿ ನಾಲ್ಕು ವರ್ಷದ ಧೃವನಾಯಕ ಮೃತಪಟ್ಟ ಮಗುವಾಗಿದೆ.
ನೀರು ಸುರಿಕೊಂಡ ಕೂಡಲೇ ಗಾಯಗೊಂಡ ಮಗುವನ್ನು ತಕ್ಷಣ ಚಿಕಿತ್ಸೆಗೆಂದು ಪಟ್ಟಣದ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಮೃತಪಟ್ಟಿದೆ ಎನ್ನಲಾಗಿದೆ. ಮಗುವಿನ ತಂದೆ ಕಿರಣ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.


