nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026
    Facebook Twitter Instagram
    ಟ್ರೆಂಡಿಂಗ್
    • ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ
    • ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
    • ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ
    • ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು
    • ತುಮಕೂರು ಕಾಂಗ್ರೆಸ್‌ ನಲ್ಲಿ ಭುಗಿಲೆದ್ದ ಆಕ್ರೋಶ: ‘ನಾಯಕರಿಂದಲೇ ಚುನಾವಣೆ ಗೆಲ್ಲಿಸಿಕೊಳ್ಳಿ’ ಎಂದು ಕಾರ್ಯಕರ್ತರ ಸವಾಲು
    • ಜೀತಕಾರ್ಮಿಕ ಪದ್ಧತಿ ನಿರ್ಮುಲನಾ ದಿನಾಚರಣೆ ದಿನಾಂಕ ಬದಲಿಸಲು ಒತ್ತಾಯ
    • ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ
    • ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೂತ್ರದ ಬಣ್ಣದಿಂದ ನಿಮ್ಮ ಆರೋಗ್ಯದ ಸ್ಥಿತಿ ತಿಳಿಯಬಹುದು
    ಆರೋಗ್ಯ May 17, 2024

    ಮೂತ್ರದ ಬಣ್ಣದಿಂದ ನಿಮ್ಮ ಆರೋಗ್ಯದ ಸ್ಥಿತಿ ತಿಳಿಯಬಹುದು

    By adminMay 17, 2024No Comments2 Mins Read
    lab

    ನಮ್ಮ ಆರೋಗ್ಯದ ಗುಟ್ಟು ತಿಳಿಯಲು ನಾವು ಯಾವಾಗಲೂ ಆಸ್ಪತ್ರೆಗೆ ಹೋಗಬೇಕು ಎಂದೇನಿಲ್ಲ. ನಮ್ಮ ದೇಹದಲ್ಲಿಯೇ ಆಗುವಂತಹ ಕೆಲವೊಂದು ಬದಲಾವಣೆಗಳು ಮತ್ತು ಸೂಚನೆಗಳು ನಮಗೆ ನಮ್ಮ ಸದ್ಯದ ಆರೋಗ್ಯ ಸ್ಥಿತಿಯ ಬಗೆಗಿನ ಮಾಹಿತಿಯನ್ನು ಕೊಡುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ, ಇದ್ದಕ್ಕಿದ್ದಂತೆ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಅದನ್ನು ಜಾಂಡೀಸ್ ಎಂದು ಹೇಳಬಹುದು. ಮಂಡಿಗಳನ್ನು ಮಡಿಸಲು ಆಗದಿದ್ದರೆ, ಅಥವಾ ಕುಳಿತು ಮೇಲಕ್ಕೆ ಎದ್ದೇಳಲು ಆಗದಿದ್ದರೆ, ಅದನ್ನು ಕೀಲು ನೋವು ಎನ್ನಬಹುದು. ಹೀಗೆ ಹಲವಾರು ವಿಚಾರಗಳ ಮೂಲಕ ನಮ್ಮ ದೇಹದ ಆರೋಗ್ಯದ ಸ್ಥಿತಿಗತಿಯನ್ನು ನಾವು ತಿಳಿದುಕೊಳ್ಳಬಹುದು.

    ಹಾಗಾದರೆ ಮನುಷ್ಯ ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣವನ್ನು ಗಮನಿಸಿ ಅದರಿಂದ ಆರೋಗ್ಯದ ಗುಟ್ಟು ತಿಳಿಯಬಹುದೇ ಎಂದು ನೀವು ಪ್ರಶ್ನೆ ಕೇಳಿದರೆ, ಹೌದು ಎನ್ನುತ್ತದೆ ವೈದ್ಯಲೋಕ. ಒಂದೊಂದು ಮೂತ್ರದ ಬಣ್ಣಕ್ಕೆ ಒಂದೊಂದು ರೀತಿಯ ಆರೋಗ್ಯ ಸಮಸ್ಯೆ ಇರಬಹುದು ಎನ್ನುವುದು ವೈದ್ಯರ ಮಾತು. ಬನ್ನಿ ಹಾಗಾದರೆ ಬೇರೆ ಮೂತ್ರದ ಬಣ್ಣಕ್ಕೆ ಅನುಗುಣವಾಗಿ ಯಾವ ಕಾಯಿಲೆಗಳು ಇರುತ್ತವೆ ಎಂಬುದನ್ನು ತಿಳಿಯೋಣ.


    Provided by
    Provided by

    ತಿಳಿ ಕಂದು ಬಣ್ಣ: ಒಂದು ವೇಳೆ ನಿಮ್ಮ ಮೂತ್ರದ ಬಣ್ಣ, ತಿಳಿ ಕಂದು ಬಣ್ಣದಿಂದ ಕೂಡಿದ್ದರೆ, ನೀವು ಸರಿಯಾಗಿ ನೀರು ಕುಡಿಯುತ್ತಿಲ್ಲ ಮತ್ತು ನಿಮ್ಮ ದೇಹಕ್ಕೆ ಇನ್ನಷ್ಟು ನೀರಿನ ಅವಶ್ಯಕತೆ ಇದೆ ಎಂಬುದನ್ನು ಸೂಚಿ ಸುತ್ತದೆ. ನೀರನ್ನು ಕುಡಿದ ನಂತರ ಸಹಜವಾಗಿ ಈ ಸಮಸ್ಯೆ ಸರಿ ಹೋಗುತ್ತದೆ. ಒಂದು ವೇಳೆ ಸರಿ ಆಗಲಿಲ್ಲ ಎಂದರೆ, ಅದು ನಿಮ್ಮ ಲಿವರ್ ಅಥವಾ ಕಿಡ್ನಿ ಡ್ಯಾಮೇಜ್ ಆಗಿರುವುದರ ಸೂಚನೆ ಇರಬಹುದು.

    ಇದರ ಜೊತೆಗೆ ಹೊಟ್ಟೆ ನೋವು, ಚರ್ಮದ ಮೇಲೆ ದದ್ದುಗಳು ಮತ್ತು ಕೈಕಾಲು ಹಿಡಿದುಕೊಂಡಂತೆ ಆಗುವುದು ಏನಾದರೂ ಕಂಡುಬಂದರೆ, ತಕ್ಷಣವೇ ನಿಮ್ಮ ವೈದ್ಯರನ್ನು ಭೇಟಿಯಾಗಿ ನಿಮ್ಮ ಆರೋಗ್ಯದ ಪರೀಕ್ಷೆ ಮಾಡಿಸಿ ಮಾಹಿತಿ ಪಡೆದುಕೊಳ್ಳಿ. ಯಾವುದೇ ಬಣ್ಣ ಇಲ್ಲದಿರುವುದು! ನೀವು ಆದರೆ ಚೆನ್ನಾಗಿ ನೀರು ಕುಡಿದು ಆರೋಗ್ಯವಾಗಿ ಇದ್ದೀನಿ ಎಂದು ತಿಳಿದುಕೊಳ್ಳುತ್ತೀರಿ. ಆದರೆ ಕೆಲವೊಮ್ಮೆ ಅತಿಯಾಗಿ ನೀರು ಕುಡಿಯುವುದು ಕೂಡ ಡೇಂಜರ್ ಎಂದು ಹೇಳುತ್ತಾರೆ. ಏಕೆಂದರೆ ಹೆಚ್ಚು ನೀರು ನಿಮ್ಮ ದೇಹದಲ್ಲಿನ ಉಪ್ಪಿನ ಅಂಶವನ್ನು ಮೂತ್ರದ ಮೂಲಕ ಹೊರಹಾಕುತ್ತದೆ. ಇದು ಕ್ರಮೇಣವಾಗಿ ನಿಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನ ಕಂಡುಬರುವ ಹಾಗಿರಬಹುದು.  ಹೀಗಾಗಿ ನೀವು ನಿಮಗೆ ಎಷ್ಟು ಅವಶ್ಯಕತೆ ಇದೆ ಅಷ್ಟು ಮಾತ್ರ ನೀರು ಕುಡಿಯಿರಿ.

    ಕೆಂಪು ಅಥವಾ ಗುಯಲಾಬಿ ಬಣ್ಣ: ಈ ಬಣ್ಣದಲ್ಲಿ ಮೂತ್ರ ಇರಬಹುದಾ ಎಂಬ ಗೊಂದಲ ಬೇಡ. ಏಕೆಂದರೆ ಈ ರೀತಿ ಕೂಡ ಮೂತ್ರದ ಬಣ್ಣ ಇರುತ್ತದೆ ಎನ್ನುತ್ತಾರೆ ವೈದ್ಯರು. ಯಾವಾಗ ನೀವು ಬೀಟ್ರೂಟ್, ಬ್ಲಾಕ್ಬೆರ್ರಿ ಇತ್ಯಾದಿ ಹಣ್ಣು ಗಳನ್ನು ಹೆಚ್ಚಾಗಿ ತಿನ್ನುತ್ತೀರಿ, ಅಂತಹ ಸಮಯದಲ್ಲಿ ನಿಮ್ಮ ದೇಹದಲ್ಲಿ ಮೂತ್ರದ ಬಣ್ಣ ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನೀವು ತೆಗೆದುಕೊಳ್ಳುವ ಔಷಧಿಗಳು ಕೂಡ ನಿಮ್ಮ ಮೂತ್ರದ ಬಣ್ಣ ಬದಲಾಗುವ ಹಾಗೆ ಮಾಡಬಹುದು.

    ಆದರೆ ಯಾವಾಗ ಮೂತ್ರದಲ್ಲಿ ರಕ್ತ ಹೋಗುವುದು ಕಂಡುಬರುತ್ತದೆ. ಆಗ ಅದು ಮೂತ್ರನಾಳದ ಸೋಂಕನ್ನು ಸೂಚಿಸುತ್ತದೆ. ಕಿಡ್ನಿ ಸಮಸ್ಯೆ, ಕಿಡ್ನಿ ಕಲ್ಲುಗಳು ಅಥವಾ ಗಂಟು ಸಮಸ್ಯೆ ಕೂಡ ಇರಬಹುದು. ರಕ್ತ ಹೆಪ್ಪುಗಟ್ಟಿರುವ ಬಗ್ಗೆ ನಿಮಗೆ ಏನಾದರೂ ಕುರುಹು ಸಿಕ್ಕರೆ, ಅಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

    ಕಿತ್ತಳೆ ಬಣ್ಣ: ನೀವು ಒಂದು ವೇಳೆ anti-inflammatory ಅಥವಾ ಕಿಮೊತೆರಪಿಗೆ ಸಂಬಂಧಪಟ್ಟ ಔಷಧಿಗಳನ್ನು ಏನಾದರೂ ತೆಗೆದುಕೊಳ್ಳುತ್ತಿದ್ದರೆ, ಅದರಿಂದಲೂ ಸಹ ನಿಮ್ಮ ಮೂತ್ರದ ಬಣ್ಣ ಬದಲಾಗುವ ಸಾಧ್ಯತೆ ಇರುತ್ತದೆ. ಗಾಢವಾದ ಹಳದಿ ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ನಿಮ್ಮ ಮೂತ್ರ ಬದಲಾಗಿದೆ ಎಂದರೆ ನಿಮ್ಮ ದೇಹದಲ್ಲಿ ನೀರಿನ ಅಂಶ ಸಾಕಷ್ಟು ಕಡಿಮೆಯಾಗಿದೆ ಎಂದರ್ಥ.

    ವೈದ್ಯರ ಪ್ರಕಾರ ಇದು ಸಹ ಮೂತ್ರನಾಳದ ಸೋಂಕನ್ನು ಸೂಚಿಸುತ್ತದೆ. ಕೆಲವು ಪ್ರಕರಣಗಳಲ್ಲಿ ಇದು ನಿಮಗೆ ಬೇರೊಂದು ರೀತಿಯ ಮಾರಕ ಸಮಸ್ಯೆ ಇರಬಹುದು. ಹಾಗಾಗಿ ಇದನ್ನು ನೀವು ನಿರ್ಲಕ್ಷ ಮಾಡ ಬೇಡಿ. ವೈದ್ಯರನ್ನು ಸಂಪರ್ಕಿಸಿ ನಿಮ್ಮ ಆರೋಗ್ಯವನ್ನು ಪರೀಕ್ಷಿಸಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಿ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    8 ತಿಂಗಳಲ್ಲಿ 31 ಕೆಜಿ ತೂಕ ಇಳಿಸಿದ ಫಿಟ್‌ ನೆಸ್ ತಜ್ಞೆ; ತೂಕ ಇಳಿಸಲು ಇಲ್ಲಿವೆ 3 ಪ್ರಮುಖ ಸೂತ್ರಗಳು!

    January 20, 2026

    ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ಬಳಕೆ: ಶಿಕ್ಷಕಿಯರು ಮತ್ತು ತಾಯಂದಿರಿಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ನಿರ್ಧಾರ

    January 20, 2026

    ಸದೃಢ ದೇಹ ಮತ್ತು ಮಾಂಸಖಂಡಗಳ ಬೆಳವಣಿಗೆಗೆ ಇಲ್ಲಿವೆ 7 ಅದ್ಭುತ ಆಹಾರಗಳು!

    January 11, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಮುಖ್ಯಮಂತ್ರಿ ಬದಲಾವಣೆ ಹಾಗೂ ಅಧಿಕಾರ ಹಂಚಿಕೆ ವಿಚಾರವಾಗಿ ಗೃಹ ಸಚಿವ ಡಾ. ಜಿ.…

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026

    ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು

    February 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.