ಪ್ರತ್ಯೇಕ ದೇಶ ಕೂಗು ಕುರಿತು ಸಂಸದ ಡಿ.ಕೆ ಸುರೇಶ್ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಡಾ.ಜಿ.ಪರಮೇಶ್ವರ್, ದೇಶ ಒಗ್ಗೂಡಿಸಬೇಕೆ ವಿನಃ ಒಡೆಯಬಾರದು ದೇಶಕ್ಕಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ. ಡಿ.ಕೆ ಸುರೇಶ್ ಯಾಕೆ ಹೀಗೆ ಹೇಳಿದರು ಗೊತ್ತಿಲ್ಲ ಪಾಕ್ ವಿಭಜನೆಯಾದಾಗ ನಾವು ಹುಟ್ಟಿರಲಿಲ್ಲ. ಚರಿತ್ರೆ ನೋಡಿದಾಗ ನೋವಾಗುತ್ತದೆ. ನಾವು ಒಂದು ರಾಷ್ಟ್ರ ಎಂಬ ನಂಬಿಕೆ ಇಟ್ಟವರು. ಗಾಂಧಿ ಸೇರಿ ಹಲವರು ದೇಶಕ್ಕಾಗಿ ಹೋರಾಡಿದ್ದಾರೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಚುನಾವಣೆ ದೃಷ್ಠಿಯಿಂದ ಚರ್ಚೆ ಮಾಡಿದ್ದೇವೆ. ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಯಾಗಿದೆ ಎಂದು ಪರಮೇಶ್ವರ್ ತಿಳಿಸಿದರು.