ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಸೊಸೆಯೊಬ್ಬಳು ತನ್ನ ಅತ್ತೆಯನ್ನೇ ಕೊಲೆಗೈದಿದ್ದಾಳೆ. ಮಹಾರಾಷ್ಟ್ರದ ನಾಗುರದಲ್ಲಿರುವ ತಮ್ಮ ಮನೆಯಲ್ಲಿ ಲೇಔಟ್ ನಿವಾಸಿ 36 ವರ್ಷದ ಪೂನಂ ಆನಂದ ಶಿಖರವಾ ಎಂಬಾಕೆ 80 ವರ್ಷದ ಅತ್ತೆಯ ಮೇಲೆ ಹಲ್ಲೆ ನಡೆಸಿ, ಕತ್ತು ಸೀಳಿ ಅವರನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂನಂ ಕಳೆದ ಕೆಲವು ವಾರಗಳಿಂದ ಔಷಧಿ ಸೇವಿಸುವುದನ್ನು ನಿಲ್ಲಿಸಿ, ತನ್ನ ಕುಟುಂಬದ ಸದಸ್ಯರೊಂದಿಗೆ ಜಗಳವಾಡುತ್ತಿದ್ದಳು. ಜಗಳವಾಡುವಾಗ ಕೋಪದ ಭರದಲ್ಲಿ ಆಕೆ ತನ್ನ ಅತ್ತೆ ತಾರಾದೇವಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕತ್ತು ಸೀಳಿದ್ದಾಳೆ.
ಹಲವು ಬಾರಿ ಅತ್ತೆಗೆ ಇರಿದು ಕೊಲೆ ಮಾಡಿದ್ದಾಳೆ. ಹತ್ಯೆಗೆ ಸಂಬಂಧಿಸಿದಂತೆ ಪೂನಂಳನ್ನು ಪೊಲೀಸರು ಬಂಧಿಸಿದ್ದಾರೆ.


