ಮಾಲಿವುಡ್ನ ಖ್ಯಾತ ನಟ ಟೊವಿನೋ ಥಾಮಸ್ ಮತ್ತು ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ನಡುವಿನ ಜಗಳ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ. ಸನಲ್ ಕುಮಾರ್ ಶಶಿಧರನ್ ನಿರ್ದೇಶನದಲ್ಲಿ ‘ವಳಕ್ಕು’ ಸಿನಿಮಾ ಮೂಡಿಬಂದಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಟೊವಿನೋ ಥಾಮಸ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಟೊವಿನೋ ಬಂಡವಾಳ ಕೂಡ ಹೂಡಿದ್ದಾರೆ.
ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ಟೊವಿನೋ ಥಾಮಸ್ ಮೂಗು ತೂರಿಸುತ್ತಿದ್ದಾರೆ ಎಂದು ಈ ಮೊದಲು ಸನಲ್ ಕುಮಾರ್ ಶಶಿಧರನ್ ಆರೋಪಿಸಿದ್ದರು. ಈ ಸಿನಿಮಾ ಸಿದ್ಧವಾಗಿ ಬಹಳ ಸಮಯ ಕಳೆದಿದೆ. ಆದರೆ ಹೀರೋ ಮತ್ತು ನಿರ್ದೇಶಕನ ನಡುವೆ ಕೆಲವು ವಿಚಾರಗಳು ಇತ್ಯರ್ಥ ಆಗದ ಕಾರಣ ಇದರ ಬಿಡುಗಡೆ ತಡವಾಗಿದೆ. ಇದರಿಂದ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ರೋಸಿ ಹೋಗಿದ್ದಾರೆ.
ಆದರೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಕ್ಕೂ ಮುನ್ನವೇ ಆನ್ ಲೈನ್ ನಲ್ಲಿ ಈ ಸಿನಿಮಾವನ್ನು ಸನಲ್ ಕುಮಾರ್ ಶಶಿಧರನ್ ಲೀಕ್ ಮಾಡಿದ್ದಾರೆ. ‘ವಳಕ್ಕು’ ಸಿನಿಮಾದ ಬಿಡುಗಡೆ ವಿಚಾರವಾಗಿ ಟೊವಿನೋ ಥಾಮಸ್ ಮತ್ತು ಸನಲ್ ಕುಮಾರ್ ಶಶಿಧರನ್ ನಡುವೆ ಮೊದಲಿನಿಂದಲೂ ಮನಸ್ತಾಪ ಇತ್ತು. ಅದು ಈಗ ಅತಿರೇಕಕ್ಕೆ ಹೋಗಿದೆ.
ಮಲಯಾಳಂ ಚಿತ್ರರಂಗದಲ್ಲಿ ಸನಲ್ ಕುಮಾರ್ ಶಶಿಧರನ್ ಅವರು ಕೆಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಈಗ ತಮ್ಮದೇ ಸಿನಿಮಾವನ್ನು ಆನ್ಲೈನ್ನಲ್ಲಿ ಸೋರಿಕೆ ಮಾಡುವ ಮೂಲಕ ಮತ್ತೊಂದು ವಿವಾದ ಮಾಡಿಕೊಂಡಿದ್ದಾರೆ.
ಈಗ ಅವರು ‘ವಿಮಿಯೋ’ ವಿಡಿಯೋ ಪ್ಲಾಟ್ ಫಾರ್ಮ್ನಲ್ಲಿ ‘ವಳಕ್ಕು’ ಸಿನಿಮಾವನ್ನು ಅಪ್ ಲೋಡ್ ಮಾಡಿದ್ದಾರೆ. ಅದನ್ನು ಕೆಲವರು ಡೌನ್ಲೋಡ್ ಮಾಡಿ ಯೂಟ್ಯೂಬ್ ನಲ್ಲೂ ಹಂಚಿಕೊಂಡಿದ್ದಾರೆ. 2020ರಲ್ಲಿ ಆರಂಭವಾದ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು 2021ರಲ್ಲಿ ಮುಗಿದಿತ್ತು. ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನ ಆಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA