ವೆಲ್ಲೂರು: ಡಿಎಂಕೆ ತಮಿಳುನಾಡನ್ನು ಹಳೆಯ ಯೋಚನೆ, ಹಳೆಯ ರಾಜಕಾರಣದಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ತಮಿಳುನಾಡಿನ ವೆಲ್ಲೂರಿನಲ್ಲಿ ಬುಧವಾರ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಡಿಎಂಕೆ ಜನರನ್ನು ಪ್ರದೇಶ, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಹೋರಾಡುವಂತೆ ಮಾಡುತ್ತದೆ. ಜನರು ಒಡೆದು ಆಳುವ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ದಿನ ಪಕ್ಷಕ್ಕೆ ಒಂದೇ ಒಂದು ಮತವೂ ಬರುವುದಿಲ್ಲ ಎಂದು ಪ್ರಾದೇಶಿಕ ಪಕ್ಷಕ್ಕೆ ತಿಳಿದಿದೆ ಎಂದು ಹೇಳಿದ ಅವರು, ಡಿಎಂಕೆ ಸಂಪೂರ್ಣ ಒಬ್ಬ ಶಾಸಕನ ಕಂಪೆನಿಯಾಗಿದೆ ಎಂದರು.
ಡಿಎಂಕೆ ಕುಟುಂಬ ರಾಜಕಾರಣದಿಂದ ತಮಿಳುನಾಡಿನ ಯುವಕರಿಗೆ ಮುಂದೆ ಹೋಗಲು ಅವಕಾಶವೇ ಸಿಗುತ್ತಿಲ್ಲ. ಡಿಎಂಕೆ ಯಲ್ಲಿ ಚುನಾವಣೆಗೆ ನಿಲ್ಲಲು ಹಾಗೂ ಅದರಲ್ಲಿ ಮುಂದುವರಿಯಲು ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ತಮಿಳು ಸಂಸ್ಕೃತಿ ವಿರೋಧಿ ಗುಣ ಹೊಂದಿರುವುದು ಅಗತ್ಯ ಎಂದು ಆರೋಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


