ರಾತ್ರಿ ವೈದ್ಯರು ಮಲಗಲು ಎಸಿ ಆನ್ ಮಾಡಿದ ನಂತರ ಎರಡು ನವಜಾತ ಶಿಶುಗಳು ಶೀತವಾಗಿ ಸಾವನ್ನಪ್ಪಿವೆ ಎಂದು ದೂರು ದಾಖಲಾಗಿದೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ದೂರಿನ ಮೇರೆಗೆ ಖಾಸಗಿ ಕ್ಲಿನಿಕ್ ಮಾಲೀಕರಾದ ಡಾ.ನೀತೂ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕಿತ್ಸಾಲಯದ ಮಾಲೀಕಿ ಡಾ. ನೀತು ಶನಿವಾರ ಎಸಿ ಆಪರೇಟ್ ಮಾಡಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಭಾನುವಾರ ಬೆಳಗ್ಗೆ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ನೀತು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಆರೋಗ್ಯ ಇಲಾಖೆ ತನಿಖೆಯನ್ನು ಘೋಷಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಕೈರಾನಾದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಮಕ್ಕಳು ಜನಿಸಿದರು. ನಂತರ, ಮಕ್ಕಳನ್ನು ಅದೇ ದಿನ ವಿಶೇಷ ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್‌ಗೆ ಸ್ಥಳಾಂತರಿಸಲಾಯಿತು. ಶನಿವಾರ ರಾತ್ರಿ ವೈದ್ಯರು ಎಸಿ ಹಾಕಿಕೊಂಡು ಮಲಗಿದ್ದು, ಮರುದಿನ ಎರಡೂ ಕುಟುಂಬದವರು ಮಕ್ಕಳನ್ನು ನೋಡಲು ಬರುವಷ್ಟರಲ್ಲಿ ಮಕ್ಕಳು ಮೃತಪಟ್ಟಿದ್ದರು.


