ಬಾದಾಮಿ: ಉದ್ಯೋಗ ಖಾತ್ರಿ ಯೋಜನೆಯ ವೈಫಲ್ಯದಿಂದಾಗಿ ಬಾದಾಮಿ ತಾಲೂಕಿನ ಕೊನೆಯ ಸೀಮೆಯಲ್ಲಿನ ಬೆಟ್ಟದ ಮೇಲಿರುವ ಅನಂತಗಿರಿ ತಾಂಡೆಯಲ್ಲಿನ ಜನರು ತಮ್ಮ ಮನೆಗಳಿಗೆ ಬೀಗ ಹಾಕಿ ಗುಳೆ ಹೋಗಿರುವ ಬಗ್ಗೆ ವರದಿಯಾಗಿದೆ.
ಖಾತ್ರಿ ಯೋಜನೆಯಲ್ಲಿ ಸರಿಯಾಗಿ ಕೆಲಸ ಸಿಗುತ್ತಿಲ್ಲ ಒಂದು ವೇಳೆ ಕೆಲಸ ಸಿಕ್ಕರೂ ಸರಿಯಾಗಿ ಸಂಬಳ ಸಿಗುತ್ತಿಲ್ಲ, ಹೀಗಾಗಿ ತಾಂಡೆಯಲ್ಲಿನ 20ಕ್ಕೂ ಅಧಿಕ ಕುಟುಂಬಗಳು ಜನರು ಕೆಲಸವನ್ನು ಅರಸಿಕೊಂಡು ಮಂಗಳೂರು, ಉಡುಪಿ, ಗೋವಾ, ಶಿವಮೊಗ್ಗಾ ಮೊದಲಾದ ಕಡೆಗೆ ಗುಳೆ ಹೋಗಿದ್ದಾರೆ ಎಂದು ಹೇಳಲಾಗಿದೆ.
ಮನೆಯಲ್ಲಿ ವಯಸ್ಸಾದ ಪೋಷಕರನ್ನು ಬಿಟ್ಟು ಕಾರ್ಮಿಕರು ಮನೆ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ. ನೆರೆ ಹೊರೆಯವರ ಸಹಕಾರದೊಂದಿಗೆ ವೃದ್ಧರು ಬದುಕುವಂತಾಗಿದೆ.
ಇಲ್ಲೇ ಉತ್ತಮ ಪಗಾರ ಕೊಟ್ರೆ ಊರಲ್ಲೇ ಕೆಲಸ ಮಾಡುತ್ತಾರೆ, ತಿಂಗಳಲ್ಲಿ ವಾರದವರೆಗೆ ಕೆಲಸ ಕೊಡುತ್ತಾರೆ ಮತ್ತೆ ಕೆಲಸ ಇರುವುದಿಲ್ಲ, ದುಡಿಯುವ ಜನ ಏನು ತಿನ್ನಬೇಕು ಎಂದು ಗ್ರಾಮದ ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


