ವಿಜಯಪುರ: ಒಂದೆಡೆ ಬರ ಮತ್ತೊಂದೆಡೆ ಸಾಲಬಾಧೆ ತಾಳಲಾರದೆ, ಬರ ಮತ್ತು ಸಾಲಬಾಧೆಯಿಂದ ಕಂಗೆಟ್ಟಿದ್ದ ರೈತನೊಬ್ಬ ನೇಣು ಬಿಗಿದುಕೊಂಡಘಟನೆ ನಡೆದಿದೆ. ಸಿಂದಗಿ ತಾಲೂಕಿನ ಸಿದ್ದನಗೌಡ ಬಿರಾದಾರ್ (32) ಮೃತ ದುರ್ದೈವಿ.
ನಂದಗೇರಿ ಗ್ರಾಮದಲ್ಲಿ ಜಮೀನು ಹೊಂದಿದ್ದ ಈತ ಬೆಳೆಗಾಗಿ ಸಾಲ ಮಾಡಿದ್ದ. ಬೆಳೆಯೂ ಕೈಕೊಟ್ಟಿದ್ದರಿಂದ ತೀವ್ರವಾಗಿ ಖಿನ್ನತೆಗೀಡಾಗಿದ್ದ. ಖಾಸಗಿ ವ್ಯಕ್ತಿಗಳ ಬಳಿ ಮಾಡಿದ್ದ ಸುಮಾರು 6 ಲಕ್ಷ ರೂ. ಸಾಲವನ್ನು ಹಿಂದಿರುಗಿಸುವಂತೆ ಈತನನ್ನು ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ರೈತ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಸಿಂದಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


