ಒಬ್ಬ ವ್ಯಕ್ತಿಯು ತನ್ನ ಒಂದು ವರ್ಷದ ಮಗುವನ್ನು ಆಕಸ್ಮಿಕವಾಗಿ ಮಡಿಲಿನಿಂದ ಬೀಳಿಸಿದ ಪರಿಣಾಮ ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ವರದಿ ತಿಳಿಸಿದೆ. ಈ ಘಟನೆ ಛತ್ತೀಸ್ ಗಡದ ರಾಯ್ ಪುರದ ಜನಪ್ರಿಯ ಮಾಲ್ ನಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆ ರಾತ್ರಿ 7:30 ರಿಂದ 8 ಗಂಟೆಯ ನಡುವೆ ನಡೆದಿದೆ ಎಂದು ವರದಿ ತಿಳಿಸಿದೆ. ಕುಟುಂಬವೊಂದು ಸಿಟಿ ಸೆಂಟರ್ ಮಾಲ್ ಗೆ ಭೇಟಿ ನೀಡಲು ಹೋಗಿದೆ. ಇದೇ ವೇಳೆ ವ್ಯಕ್ತಿಯೋರ್ವರು ತನ್ನ ಒಂದು ವರ್ಷದ ಮಗುವನ್ನು ಮಡಿಲಲ್ಲಿಟ್ಟುಕೊಂಡು ಮೂರನೇ ಮಹಡಿಯಲ್ಲಿ ಎಸ್ಕಲೇಟರ್ ಹತ್ತುತ್ತಿದ್ದಾಗ ಎರಡನೇ ಮಗುವನ್ನು ಎಸ್ಕಲೇಟರ್ ಮೇಲೆ ಕರೆದುಕೊಂಡು ಹೋಗಲು ಕೈ ಚಾಚಿದಾಗ ಮಡಿಲಲ್ಲಿದ್ದ ಮಗು ಎತ್ತರದಿಂದ ಕೈಯಿಂದ ಜಾರಿ ಕೆಳಗೆ ಬಿದ್ದಿದೆ ಎನ್ನಲಾಗಿದೆ.
ಈ ವ್ಯಕ್ತಿ ಮಾಲ್ ನಲ್ಲಿ ಮಕ್ಕಳ ಜೊತೆ ತಿರುಗಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದು, ಮಡಿಲಲ್ಲೊಂದು ಮಗುವಿದೆ. ಇನ್ನೊಂದು ಮಗು ಎಸ್ಕಲೇಟರ್ ಹತ್ತಲು ಸಹಾಯ ಮಾಡಲು ಆ ವ್ಯಕ್ತಿ ಕೈ ಚಾಚಿದ್ದಾರೆ. ಈ ವೇಳೆ ಮಡಿಲಿಂದ ಮುಗ್ಧ ಮಗು ಜಾರಿ ಕೆಳಗೆ ಬಿದ್ದಿದೆ. ತಕ್ಷಣ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸದ್ಯ ದೇವೇಂದ್ರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


