ತಿಪಟೂರು: ರಾಜ್ಯ ಸರ್ಕಾರ ಪ್ರಾರಂಭಿಸಿರುವ ಗೃಹಲಕ್ಷ್ಮಿ ಸೇರಿದಂತೆ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು 5 ವರ್ಷಗಳ ಕಾಲ ನೀಡಲಿದ್ದು ಯಾವುದೇ ಕಾರಣಕ್ಕೂ ಗ್ಯಾರೆಂಟಿ ನಿಲ್ಲುವುದಿಲ್ಲ ಎಂದು ಶಾಸಕ ಷಡಕ್ಷರಿ ಅವರು ತಿಳಿಸಿದರು.
ತಾಲೂಕು ಆಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ತಿಪಟೂರು ಕಲ್ಪತರು ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದ ಗೃಹಲಕ್ಷ್ಮಿ ಯೋಜನೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಕೆ.ಷಡಕ್ಷರಿ ಯವರು ಕೆಲವರು ಯುವ ಜನಗಳು ಲೋಕಸಭಾ ಚುನಾವಣೆ ಆದಮೇಲೆ ನಿಲ್ಲುತ್ತವೆ ಎಂದು ಪ್ರತಿಪಕ್ಷದವರು ಮಾತನಾಡುತ್ತಿದ್ದಾರೆ.
ಇವರ ಮಾತಿಗೆ ಯಾರು ಕಿವಿ ಕೊಡಬೇಡಿ, ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ನೀಡಿದ ಪ್ರಣಾಳಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತೇವೆ. ನೀಡಿದ ಆಶ್ವಾಸನೆಗಳನ್ನು ಕಾರ್ಯಕ್ರಮ ರೂಪದಲ್ಲಿ ಸರ್ಕಾರ ಪ್ರಾರಂಭಿಸಿದೆ. ಈ ತಾಲೂಕಿನಲ್ಲಿ ಯೋಜನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ 49,000 ಕುಟುಂಬಗಳ ಯಜಮಾನರಿಗೆ ಖಾತೆಗೆ 2,000 ಇಂದು ವರ್ಗಾವಣೆ ಆಗಲಿದೆ. ಇದಕ್ಕೇನು ಕೊನೆಯ ದಿನಾಂಕವಿಲ್ಲ, ನೋಂದಣಿ ಮಾಡಿದ ಎಲ್ಲಾ ಪಲಾನುಭವಿಗಳಿಗೂ ಈ ಯೋಜನೆ ದೊರಕಲಿದೆ. ಈ ಕಾರ್ಯಕ್ರಮದಲ್ಲಿ ಉಪ ವಿಭಾಗ ಉಪ ವಿಭಾಗ ಅಧಿಕಾರಿಸಪ್ತ ತಹಸೀಲ್ದಾರ್ ಪವನ್ ಕುಮಾರ್ ನಗರಸಭಾ ಆಯುಕ್ತ ವಿಶ್ವೇಶ್ವರ ಭದರಾಗಡೆ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ತಾಲೂಕು ಯೋಜನಾ ಫಲಾನುಭವಿಗಳು ಇದ್ದರು.
ವರದಿ: ಆನಂದ್ ತಿಪಟೂರು


