ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹೆಚ್.ಬೈರಾಪುರ ಗ್ರಾಮದಲ್ಲಿ ಬಿದ್ದ ಭಾರೀ ಮಳೆಗೆ, ತಿಪಟೂರು-ಹುಳಿಯಾರು ರಸ್ತೆ ಮಧ್ಯದ ಹೆಚ್. ಬೈರಾಪುರದ ಗ್ರಾಮದ ಮಧ್ಯಭಾಗದಲ್ಲಿರುವ ಎರಡು ಸೇತುವೆಗಳು, ಆಪಿನಕಟ್ಟೆ ಹಳ್ಳ ಮತ್ತು ಕುನ್ನಿರಕಟ್ಟೆ ಹಳ್ಳದ ಬಳಿ ಹಳ್ಳದಿಂದ ನೀರು ಬರುತ್ತಿದ್ದು, ಹುಳಿಯಾರು ಮಾರ್ಗದ ರಸ್ತೆ ಸಂಪೂರ್ಣ ಜಲಾವೃತವಾಗಿದೆ.

ಈ ಎರಡು ಕೆರೆಯ ನೀರುಗಳು ಈ ಸೇತುವೆ ಮಾರ್ಗ ಬರುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮತ್ತು ದಾರಿ ಹೋಕರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು, ಈ ಭಾಗದಲ್ಲಿ ವಾಹನ ಸಂಪೂರ್ಣ ದಟ್ಟಣೆಯಾಗಿದೆ.

ಈ ಸೇತುವೆಗಳು ತೀರ ಚಿಕ್ಕದಾಗಿದ್ದು,ಮಳೆ ಬಂದಾಗಲೆಲ್ಲ ಪದೇ ಪದೇ ಈ ರೀತಿ ತೊಂದರೆಗಳು ಅನುಭವಿಸುವಂತಾಗಿದೆ. ಎರಡೂ ಸೇತುವೆಗಳನ್ನು ಮೇಲ್ಸೇತುವೆಗಳಾಗಿ ನಿರ್ಮಾಣ ಮಾಡಿ ರೈತರು, ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


