ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಬಗ್ಗೆ ನಮಗೆ ಮಾಹಿತಿ ಇಲ್ಲ. ನಿಮಗೇನಾದರೂ ಇದ್ದರೆ ನಮಗೆ ತಿಳಿಸಿ. ನಿಮಗೆ ಗೊತ್ತಿದ್ದರೆ ಹೇಳಿ ನಮಗೆ ಸಹಾಯ ಆಗುತ್ತದೆ ಎಂದು ಮಾಧ್ಯಮಗಳ ಮುಂದೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೇಳಿಕೊಂಡ ಪ್ರಸಂಗ ನಡೆಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತಿಗಳ ಪತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಸಾಹಿತಿಗಳು ಅನೇಕ ವಿಷಯಗಳನ್ನು ಗಮನಿಸುತ್ತಾರೆ. ಸಿಎಂಗೆ ಪತ್ರ ಬರೆದಿದ್ದಾರೆ, ತರಿಸಿಕೊಂಡು ನೋಡುತ್ತೇನೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು. ಸಿಎಂಗೆ ಬರೆದ ಪತ್ರದಲ್ಲಿ ಅವರು ಉಲ್ಲೇಖ ಮಾಡಿದ್ದನ್ನು ಎಸ್ ಐಟಿ ಪರಿಗಣಿಸುತ್ತೆ ಎಂದ ಅವರು, ಪ್ರಕರಣದ ಹಿಂದೆ ತಿಮಿಂಗಿಲ ಇದೆ ಎಂಬ ಮಾಜಿ ಸಿಎಂ ಎಚ್ ಡಿಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ತಿಮಿಂಗಿಲ ಯಾರು ಅಂತ ಹೇಳಲಿ. ಅವರಿಗೆ ಗೊತ್ತಿದೆ ಅಂದ ಮೇಲೆ ಹೇಳಬೇಕು ಅಲ್ವಾ? ಹೇಳದೆ ಇರುವುದೆ ದೊಡ್ಡ ತಪ್ಪು. ದಾಖಲೆ ಕೊಟ್ಟ ಮೇಲೆ ತನಿಖೆ ಮಾಡುತ್ತೇವೆ. ಮೊದಲು ದಾಖಲೆ ಕೊಡಲಿ. ಕೊಟ್ಟ ಮೇಲೆ ನಾವು ತನಿಖೆ ಮಾಡದಿದ್ರೆ ತಪ್ಪಾಗುತ್ತದೆ ಎಂದು ತಿರುಗೇಟು ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296