ಡಾಲಿ ಧನಂಜಯ್ ಸಿನಿ ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದು ಈಗ ಸಿನಿಮಾದಲ್ಲಿ ಅತಿ ಹೆಚ್ಚು ಯಶಸ್ಸು ಕಂಡು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ಡಾಲಿ ಹುಟ್ಟುಹಬ್ಬ. ಇಲ್ಲಿದೆ ಡಾಲಿ ಧನಂಜಯ್ ಬಗ್ಗೆ ಯಾರಿಗೂ ತಿಳಿಯದ ಕುತೂಹಲ ವಿಷಯಗಳು
ಈ ನಾಯಕ ನಟನ ಮೂಲ ಹೆಸರು ಕಲ್ಲೇನಹಳ್ಳಿ ಅಡವಿಸ್ವಾಮಿ ಧನಂಜಯ್ ಅಂತಲೇ ಇದೆ. ಆಗಸ್ಟ್–23, 1985ರಂದು ಹಾಸನ ಜಿಲ್ಲೆಯ ಅರಸಿಕೇರಿಯ ಕಲ್ಲೇನಹಳ್ಳಿಯಲ್ಲಿ ಜನಿಸಿದ್ದಾರೆ. ಇದೀಗ 39 ಕ್ಕೆ ಕಾಲಿಡುತ್ತಿದ್ದಾರೆ.
SSLCಯಲ್ಲಿ ಜಿಲ್ಲೆಗೆ ಫಸ್ಟ್ ಡಾಲಿ: ಧನಂಜಯ್ ತುಂಬಾನೆ ಚೆನ್ನಾಗಿಯೇ ದ್ದಾರೆ. SSLCಯಲ್ಲಿ ಶೇಕಡ ೯೦ ಕ್ಕೂ ಹೆಚ್ಚು ಅಂಕ ಪಡೆದಿದ್ದರು. ಜಿಲ್ಲೆಗೆ ಫಸ್ಟ್ ಬಂದಿದ್ದರು. ಶಾಲಾ ದಿನಗಳಲ್ಲಿಯೇ ನಾಟಕದ ಬಗ್ಗೆ ಆಸಕ್ತಿ ಹೊಂದಿದ್ದರು. ಏಕಪಾತ್ರ ಅಭಿನಯ ಕೂಡ ಮಾಡಿದ್ದರು. ಇವರ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರು ಆಗಿದ್ದರು.
ಧನಂಜಯ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ಇನ್ಫೋಸಿಸ್ ನಲ್ಲಿ ಉದ್ಯೋಗ ಕೂಡ ಮಾಡಿದ್ದಾರೆ. ಈ ಸಮಯದಲ್ಲಿ ಸುಮಾರು ೨೫ ಸಾವಿರ ಸಂಬಳ ಪಡೆಯುತ್ತಿದ್ದರು. ಸಿನಿಮಾ ಆಸಕ್ತಿಯಿಂದ ಆ ಕೆಲಸವನ್ನ ಬಿಟ್ಟು ಬಂದಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q