ತುಮಕೂರು: ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದ ಸಂತೋಷದಲ್ಲಿ ಇದ್ದ ನನಗೆ ನಟ ವಿಜಯ ರಾಘವೇಂದ್ರ ಪತ್ನಿ ಸಾವಿನ ವಿಷಯ ಕೇಳಿ ಶೇಕಡ 100ರಷ್ಟು ಸಂತೋಷ ಇಳಿದುಹೋಯ್ತು ಎಂದು ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ತಿಳಿಸಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಿಜಕ್ಕೂ ಈ ವಿಷಯ ಕೇಳಿ ಬಹಳ ದುಃಖ ಆಗಿದೆ. ನಮ್ಮದು ಮತ್ತು ಅವರದ್ದು ಬಹಳ ದೊಡ್ಡ ಒಡನಾಟ. ಚಿನ್ನಾರಿ ಮುತ್ತನ ಬೆಳವಣಿಗೆಯನ್ನು ಕಾಣ್ತಾ ಬಂದವನು ಎಂದರು.
ನನ್ನ ಚೆನ್ನಾರಿ ಮುತ್ತನನ್ನ ಅಲ್ಲಿ ಕಂಡವನು. ಈ ವಿಷಯ ಕೇಳಿ ನಿಜವಾಗಿಯೂ ನನಗೆ ಶಾಕ್ ಆಗ್ತಿದೆ. ನಿನ್ನೆ ಅವರ ಮಗ ಶೌರ್ಯನ ಜೊತೆ ಕ್ಲಾಸ್ ನಡಿತಾ ಇತ್ತು ಎಂದರು. ನೀವು ಹೇಳ್ತಿರೋದನ್ನ ಕೇಳಿದ್ರೆ ಇದು ಏನಿದು ಅನಿಸುತ್ತೆ. ನಿಜವಾಗಿಯೂ ಪರಿತಾಪಪಡುವ ದುಃಖದ ವಿಷಯವಾಗಿದೆ ಎಂದು ಹೇಳಿದರು.
ನನಗೆ ರಿಯಾಕ್ಟ್ ಮಾಡೋಕೆ ಆಗ್ತಿಲ್ಲ. ಬಹಳ ಬಹಳ ದುಃಖದ ಸಂಗತಿ. ಯಾಕೋ ಆ ಕುಟುಂಬದ ಸುತ್ತ ಛಾಯೆಗಳು ನಿರಂತರವಾಗಿ ಎರಗ್ತಿದಿಯಲ್ಲ ಅನ್ನೋದೆ ಬಹಳ ದುಃಖದ ವಿಷಯ ಎಂದು ತಿಳಿಸಿದರು.
ಯಾರ್ಯಾರನ್ನ ಕಳೆದುಕೊಳ್ಳಬಾರದು ಅಂತ ಇಷ್ಟಪಡ್ತಿವೋ ಅವರನ್ನ ಕಳೆದುಕೊಳ್ತಿದ್ದೇವೆ. ಅಪ್ಪು ಇದಿದ್ರೆ, ಹಾಗೇ ಸ್ಪಂದನ ಇದಿದ್ರೆ, ಒಂದೇ ಕುಟುಂಬದಲ್ಲಿ ಈ ರೀತಿಯಾಗಿ ಆಗ್ತಿದಿಯಲ್ಲಾ ಅನ್ನೋದೆ ದುಃಖದ ಸಂಗತಿ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 81233 82149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA