ಬೆಂಗಳೂರು: ಮನೆ ಕಾಣಲ್ಲ ಅಂತ ಹೆಮ್ಮರವಾಗಿ ಬೆಳೆದಿದ್ದ ಹುಣಸೆ ಮರಕ್ಕೆ ಕಿಡಿಗೇಡಿಗಳು ವಿಷವಿಟ್ಟ ಘಟನೆ ಮಲ್ಲೇಶ್ವರಂನಲ್ಲಿ ಜರುಗಿದೆ. ಮರದ ಬುಡ ತೂತು ಮಾಡಿ ಮನೆ ಮಾಲೀಕ ವಿಷವಿಟ್ಟಿದ್ದಾನೆ. ಆಸಿಡ್ ಇಂಜೆಕ್ಷನ್ ನೀಡಿ ಮರಗಳ ಮಾರಣ ಹೋಮಕ್ಕೆ ಸಂಚು ನಡೆಸಿದ್ದು, ಕೆಲವರು ನಿವೇಶನ, ಮನೆಗಳಿಗೆ ತೊಂದರೆ ಎಂದು ಮರಗಳಿಗೆ ಕೊಳ್ಳಿ ಇಡಲಾಗಿದೆ. ಈ ಬಗ್ಗೆ ವೃಕ್ಷ ವೈದ್ಯ ವಿಜಯ್ ನಿಶಾಂತ್ ಬೇಸರ ಹೊರ ಹಾಕಿದರು.
ದಯವಿಟ್ಟು ಯಾರೂ ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದರು. ನಗರದಲ್ಲಿ 40° ಬಿಸಿಲು ದಾಖಲಾಗ್ತಿದೆ. ಮರಗಳು ತುಂಬಾ ಅವಶ್ಯಕತೆ ಇದೆ. ಮನೆ ಕಾಣಲ್ಲ ಎಂದು ಮರಗಳಿಗೆ ವಿಷ ಹಾಕೋದು ಕಾನೂನು ಬಾಹಿರ. ಮರಕ್ಕೆ ಮಾರಕ ಕೆಲಸ ಮಾಡಿದ್ರೆ ನಿಮ್ಮ ಮೇಲೆ ಕೇಸ್ ಕೂಡ ದಾಖಲಾಗುತ್ತೆ ಎಂದು ವೃಕ್ಷ ವೈದ್ಯ ವಿಜಯ್ ನಿಶಾಂತ್ ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296