ಹೈದರಾಬಾದ್: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳು ತನ್ನ ಪ್ರಿಯಕರನ ಜೊತೆ ಇರುವುದನ್ನು ಪ್ರತ್ಯಕ್ಷವಾಗಿ ಕಂಡ ತಾಯಿ, ಕುಪಿತಗೊಂಡು ಮಗಳನ್ನೇ ಕತ್ತು ಹಿಸುಕಿ ಕೊಂದಿದ್ದಾಳೆ. ಹೈದರಾಬಾದ್ ನ ಇಬ್ರಾಹಿಂಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಭಾರ್ಗವಿ (19) ಮೃತ ಮಗಳಾಗಿದ್ದರೆ, ಜಂಗಮ್ಮ ಮಗಳನ್ನೇ ಕೊಂದ ತಾಯಿಯಾಗಿದ್ದಾರೆ.
ಬೆಳಗ್ಗೆ ತಾಯಿ ಜಂಗಮ್ಮ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಮಗಳು ತನ್ನ ಪ್ರಿಯಕರನ ಜೊತೆಯಲ್ಲಿದ್ದದ್ದನ್ನು ತಾಯಿಯಾದ ಜಂಗಮ್ಮ ಕಂಡಿದ್ದಾಳೆ. ಜೊತೆ ಇದ್ದ ಆ ಹುಡುಗನನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ಇದಾದ ಬಳಿಕ, ಮಗಳಿಗೆ ಹೊಡೆದಿದ್ದಲ್ಲದೇ, ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಜಂಗಮ್ಮ ಕೊಲೆ ಮಾಡಿರುವುದನ್ನು ಸ್ವತಃ ಅವರ ಮಗ ನೋಡಿದ್ದು, ಅಮ್ಮ ಅಕ್ಕನನ್ನು ಕೊಲೆ ಮಾಡಿದ್ದನ್ನು ನಾನು ನೋಡಿದ್ದೇನೆ ಎಂದು ತಾಯಿ ಜಂಗಮ್ಮ ವಿರುದ್ಧ ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಯುವತಿಯ ಅಪ್ರಾಪ್ತ ಸಹೋದರ, ತಾನು ಕೊಲೆಯನ್ನು ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾನೆ. ತಾಯಿ ತನ್ನ ಸಹೋದರಿಯ ಮೇಲೆ ಹಲ್ಲೆ ಮಾಡುವುದನ್ನು ಕಿಟಕಿಯಿಂದ ನೋಡಿದ್ದಾನೆ ಎಂದು ಇಬ್ರಾಹಿಂಪಟ್ಟಣಂ ಪೊಲೀಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ.
ಪುತ್ರಿ ಭಾರ್ಗವಿಗೆ ಮದುವೆ ಮಾಡಬೇಕು ಎಂದು ಜಂಗಮ್ಮ ಯೋಚಿಸಿದ್ದು, ಮಗಳಿಗೆ ಸೂಕ್ತ ವರನ ಅನ್ವೇಷಣೆಯಲ್ಲಿದ್ದರು. ಅದರ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


