ಬೆಂಗಳೂರು: ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯಲ್ಲಿ ಬಸವನಗುಡಿ ವಾರ್ಡ್ ಹೆಸರನ್ನು ದೊಡ್ಡ ಗಣಪತಿ ಎಂದು ಬದಲಿಸಿರುವುದಕ್ಕೆ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರ್ಡ್ ಮರು ವಿಂಗಡಣೆಯ ಕರಡು ಪಟ್ಟಿಯಲ್ಲಿ ಬಸವನಗುಡಿ ವಿಧಾನಸಭೆ ಕ್ಷೇತ್ರದ 198ನೇ ವಾರ್ಡ್ ಹೆಸರು ಬಸವನಗುಡಿ ಎಂದಿತ್ತು. ಆದರೆ, ಅಂತಿಮ ಅಧಿಸೂಚನೆಯಲ್ಲಿ ಇದನ್ನು ‘ದೊಡ್ಡ ಗಣಪತಿ’ ಎಂದು ಬದಲಿಸಲಾಗಿದೆ.
ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಅಧಿಸೂಚನೆಯಾಗಿದ್ದು, ಇದನ್ನು ಕೂಡಲೇ ಬದಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


