ಬೆಂಗಳೂರು: ಮುಖಂಡರು ತಮ್ಮ ಕಾರುಗಳಿಗೆ ನಿಯಮ ಬಾಹಿರವಾಗಿ ಅಳವಡಿಸಿದ್ದ ಸಂಘಟನೆ ಹೆಸರಿದ್ದ ನಾಮಫಲಕ ಹಾಗೂ ಹಸಿರು ಟಾಪ್ ಲೈಟ್ (ಕಾರಿನ ಮೇಲ್ಬಾಗ) ಅನ್ನು ವೈಟ್ ಫಿಲ್ಡ್ ವಿಭಾಗದ ಪೋಲಿಸರು, ಶುಕ್ರವಾರ ತೆರವುಗೊಳಿಸಿದರು.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾವೇರಿ ಹೋರಾಟಕ್ಕೆ ರತ್ನ ಭಾರತ ರೈತ ಸಮಾಜದ ರಾಜ್ಯ ಅಧ್ಯಕ್ಷ ಲಕ್ಷ್ಮಣ್ ನೇತೃತ್ವದಲ್ಲಿ ಹೋರಾಟಗಾರರು ಕಾರುಗಳಲ್ಲಿ ಬರುತ್ತಿದ್ದರು ಈ ವೇಳೆ ಪೋಲಿಸರು ನಾಮಫಲಕ ಹಾಗೂ ಹಸಿರು ಟಾಪ್ ಲೈಟ್ ತೆರವುಗೊಳಿಸಿದರು.


