ಬೆಂಗಳೂರು: ಸ್ಕೂಟರ್ ಸವಾರನೊಬ್ಬ ಕಾರು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಸರ್ಜಾಪುರ ರಸ್ತೆಯಲ್ಲಿ ಜರುಗಿದೆ. ರಾಜಧಾನಿಯಲ್ಲಿ ರೋಡ್ ರೇಜ್ ಪ್ರಕರಣಗಳು ಮಿತಿಮೀರಿ ಹೆಚ್ಚುತ್ತಿವೆ. ಕೆಲವು ವರದಿಯಾಗುತ್ತಿವೆ, ಕೆಲವು ಗಮನಕ್ಕೆ ಬರದೇ ಹೋಗುತ್ತಿವೆ.
ಅಖಿಲ್ ಸಾಬು ಎಂಬವರು ಸರ್ಜಾಪುರ ರಸ್ತೆಯಲ್ಲಿ ಅನುಭವಿಸಿದ ಯಾತನೆಯನ್ನು ನಗರ ಪೊಲೀಸರು, ಗೃಹ ಸಚಿವರಿಗೆ ಎಕ್ಸ್ ನಲ್ಲಿ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಬಳಿಕ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸರ್ಜಾಪುರ ರಸ್ತೆಯಲ್ಲಿ ಕುಟುಂಬದೊಂದಿಗೆ ಅಖಿಲ್ ಸಾಬು ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾಗ, ಹೋಂಡಾ ಆ್ಯಕ್ಟಿವಾ ಬೈಕ್ ನಲ್ಲಿ ಬಂದ ವ್ಯಕ್ತಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ನಡುರಸ್ತೆಯಲ್ಲಿ ಜಗಳವಾಗಿದೆ. ಜಗಳದ ವೇಳೆ ಕಾರಿನ ಎಡಭಾಗದ ಕಿಟಕಿಯನ್ನು ಆರೋಪಿ ಹೆಲ್ಮೆಟ್ ನಿಂದ ಹೊಡೆದು ಒಡೆದು ಹಾಕಿದ್ದಾನೆ. ಆಗ ಕಾರಿನಲ್ಲಿದ್ದ ಅಖಿಲ್ ಪತ್ನಿ ಹಾಗೂ ಮಗುವಿನ ಕೈಗೆ ಗಾಯವಾಗಿದೆ. ಇದನ್ನು ಪ್ರಶ್ನೆ ಮಾಡಿದ ಅಖಿಲ್ ಮೇಲೂ ಹಲ್ಲೆ ಎಸಗಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ. ಜಗದೀಶ್ ಎಂಬಾತನ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


