ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ನೀಡುತ್ತವೆ. ಫಲಾನುಭವಿಗಳ ಆಹಾರ ಭದ್ರತೆಗಾಗಿ ಉಚಿತ ಪಡಿತರವನ್ನು ಒದಗಿಸುತ್ತದೆ. ಆದರೆ ಈಗ ಭಾರತ ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದೆ.
ಈ ಹಿಂದೆ ಕೇಂದ್ರವು ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ನೀಡುತ್ತಿತ್ತು. ಆದರೆ ಇದೀಗ ಉಚಿತ ಅಕ್ಕಿ ಬದಲಿಗೆ 9 ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಭಾರತ ಸರ್ಕಾರದ ಉಚಿತ ಪಡಿತರ ಯೋಜನೆಯಡಿ ದೇಶದ 90 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ಆಯಾ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಪಡಿತರ ನೀಡುತ್ತಿದೆ. ಈ ಹಿಂದೆ ಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿತ್ತು. ಆದರೆ ಇದೀಗ ಕೆಲವು ಸುದ್ದಿಗಳ ಪ್ರಕಾರ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ಬದಲು 9 ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ಮುಂದಾಗಿದೆ.
ಇವುಗಳಲ್ಲಿ ಗೋಧಿ, ಕಾಳುಗಳು, ಧಾನ್ಯಗಳು, ಸಕ್ಕರೆ, ಉಪ್ಪು, ಸಾಸಿವೆ ಎಣ್ಣೆ, ಹಿಟ್ಟು, ಸೋಯಾಬೀನ್ ಮತ್ತು ಮಸಾಲೆಗಳು ಸೇರಿವೆ ಎಂದು ತಿಳಿದು ಬಂದಿದೆ.ಕೆಲವು ವರದಿಗಳ ಪ್ರಕಾರ, ಉಚಿತ ಅಕ್ಕಿ ಬದಲಿಗೆ ಈ ಸರಕುಗಳನ್ನು ನೀಡಲಾಗುವುದು ಎಂದು ಹೇಳಿದರೆ, ಇನ್ನೂ ಕೆಲವು ವರದಿಗಳು ಅಕ್ಕಿಯೊಂದಿಗೆ ಇತರ ಒಂಬತ್ತು ರೀತಿಯ ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


