ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಚೆನ್ನೈಗೆ ಆಗಮಿಸಲಿದ್ದಾರೆ. ಸಂಜೆ 6 ಗಂಟೆಗೆ ಚೆನ್ನೈ ಪಾಂಡಿ ಬಜಾರ್ ನಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಚೆನ್ನೈ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತಮಿಳಿಸೈ ಸೌಂದರ್ ರಾಜನ್ ಮತ್ತು ಕೇಂದ್ರ ಕ್ಷೇತ್ರದ ಅಭ್ಯರ್ಥಿ ವಿನೋಜ್ ಪಿ ಸೆಲ್ವಂ ಅವರಿಗಾಗಿ ರೋಡ್ ಶೋ ಆಯೋಜಿಸಲಾಗಿದೆ.
ನಾಳೆ ಬೆಳಗ್ಗೆ ವೆಲುರಿನಲ್ಲಿ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ವೆಲೂರು ಕ್ಷೇತ್ರದ ಅಭ್ಯರ್ಥಿ ಎಸಿ ಷಣ್ಮುಗಂ ಮತ್ತು ಧರ್ಮಪುರಿ ಕ್ಷೇತ್ರದ ಪಿಎಂಕೆ ಅಭ್ಯರ್ಥಿ ಸೌಮ್ಯ ಅನ್ಪುಮಣಿ ಪರ ಪ್ರಧಾನಿ ಮತ ಯಾಚನೆ ಮಾಡಲಿದ್ದಾರೆ. ನರೇಂದ್ರ ಮೋದಿ ಅವರು ಮಧ್ಯಾಹ್ನ ಮೇಟುಪಾಳ್ಯಂನಲ್ಲಿ ರ್ಯಾಲಿ ಮತ್ತು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊಯಮತ್ತೂರು ಅಭ್ಯರ್ಥಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ,ಕೇಂದ್ರ ಸಚಿವ ಹಾಗೂ ನೀಲಗಿರಿ ಕ್ಷೇತ್ರದ ಅಭ್ಯರ್ಥಿ ಎಲ್.ಮುರುಗನ್, ಪೊಲ್ಲಾಚಿ ಅಭ್ಯರ್ಥಿ ಕೆ. ವಸಂತರಾಜನ್ ಅವರಿಗೆ ಪ್ರಧಾನಿ ಮತ ಯಾಚಿಸಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


