ರಿಯಾಲಿಟಿ ಶೋನಲ್ಲಿ ಅದೊಂದು ಪ್ರಶ್ನೆ ಕೇಳಿದ್ದಕ್ಕೆ ಗಾಯಕಿಯೊಬ್ಬರು ನಿರೂಪಕನಿಗೆ ಕೆನ್ನೆಗೆ ಬಾರಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಹೌದು, ಕಾರ್ಯಕ್ರಮದ ಸಹ ನಿರೂಪಕನಾಗಿದ್ದ ಹಾಸ್ಯ ಕಲಾವಿದ ಶೆರಿ ನನ್ಹಾ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಷಾಜಿಯಾ ಮಂಜೂರ್ ಅವರ ಹನಿಮೂನ್ ಕುರಿತಾಗಿ ಕಾಮೆಂಟ್ ಮಾಡಿದ್ದರು. ‘ನಮ್ಮ ಮದುವೆಯಾದ ಬಳಿಕ ನಿಮ್ಮನ್ನು ನೇರವಾಗಿ ಮಾಂಟೆ ಕಾರ್ಲೋಗೆ ಹನಿಮೂನ್ ಗೆ ಕರೆದುಕೊಂಡು ಹೋಗುತ್ತೇನೆ. ನೀವು ಯಾವ ಕ್ಲಾಸ್ ನ ವಿಮಾನದ ಟಿಕೆಟ್ ನಲ್ಲಿ ಪ್ರಯಾಣ ಮಾಡಲು ಇಚ್ಛಿಸ್ತಿರೀ ಅಂತಾ ತಿಳಿಸ್ತೀರಾ’ ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದ್ದಾರೆ. ಆದರೆ ಇದು ಶಾಜಿಯಾ ಮಂಜೂರ್ ಗೆ ತಮಾಷೆಯಾಗಿ ಕಂಡಿಲ್ಲ. ಆಗ ಸಿಟ್ಟಾದ ಆಕೆ, ನಿರೂಪಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಮಾತ್ರವಲ್ಲದೆ, ನಿರೂಪಕನ ಕೆನ್ನೆಗೂ ಬಾರಿಸಿ ಹಲ್ಲೆ ಮಾಡಿದ್ದಾರೆ.
ಅಂದಹಾಗೆ ಇದೇ ಶೋನಲ್ಲಿ ಹಿಂದೊಮ್ಮೆ ಬಂದಿದ್ದ ಶಾಜಿಯಾ ಮಂಜೂರ್ ಆಕರ್ಷಕವಾಗಿ ತಮಾಷೆ ಮಾಡಿದ್ದರು. ಈ ಬಾರಿಯೂ ಕೂಡ ಇದು ತಮಾಷೆಯಾಗಿರಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಈ ಬಾರಿ ಹೀಗೆ ನಡೆಯಲಿಲ್ಲ. ಒಟ್ಟಿನಲ್ಲಿ ಈ ಘಟನೆ ಇದು ಪ್ರಧಾನ ನಿರೂಪಕ ಹೈದರ್ ಮಾತ್ರವಲ್ಲದೆ, ಸೆಟ್ ನಲ್ಲಿದ್ದ ಎಲ್ಲರಿಗೂ ಆಘಾತ ನೀಡಿತ್ತು.
ಸದ್ಯ ಪಾಕಿಸ್ತಾನದ ಗಾಯಕಿ ಶಾಜಿಯಾ ಮಂಜೂರ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296