ಒಮ್ಮೆ ಸಿಂಹಳಪುರದ ಅರಸು ವೀರಬಲ್ಲಾಳನು ತನ್ನ ಸಕಲ ಸೈನ್ಯ ತೆಗೆದುಕೊಂಡು ಪಕ್ಕದ ರಾಜ್ಯ ವಿಕ್ರಮಪುರಿ ವಶಪಡಿಸಿಕೊಳ್ಳಲು ತಯಾರು ನಡೆಸಿದ. ಅದರಂತೆ ವಿಕ್ರಮಪುರದ ಗಡಿವರೆವಿಗೂ ಸೈನ್ಯ ತೆಗೆದುಕೊಂಡು ಹೋದ, ಆದರೆ ಇದಕ್ಕೆ ತಕ್ಕ ಉತ್ತರ ಕೊಡಲು ವಿಕ್ರಮಪುರ ಅರಸ ಚಂದ್ರಚೂಡನು ಸರಿಯಾಗಿ ತಯಾರು ಮಾಡಿಕೊಂಡಿದ್ದ. ಮತ್ತು ಅವರ ಆಕ್ರಮಣಕ್ಕಾಗಿ ಕಾಯುತ್ತಿದ್ದ ನಂತರ ವೀರಬಲ್ಲಾಳನು ನೋಡು ಚಂದ್ರಚೂಡ ನೀನಾಗಿಯೇ ಶರಣಾದರೆ ಸರಿ ಇಲ್ಲವಾದರೆ ಆಕ್ರಮಣ ನಡೆಸಬೇಕಾಗುತ್ತದೆ ಮತ್ತು ಗೆಲುವು ನಮ್ಮದಾಗುತ್ತದೆ ಎನ್ನುವಾಗ ಪಕ್ಕದ ಮರದ ಕೊಂಬೆಯಲ್ಲಿದ್ದ ಹಲ್ಲಿ ಲೊಚ್ ಲೊಚ್ ಎಂದು ಲೊಚಗುಟ್ಟಿತು, ಇದನ್ನು ಗಮನಿಸಿದ ರಾಜಪುರೋಹಿತ ಮಹಾರಾಜರೇ ಅವರ ಉತ್ತರಕ್ಕಾಗಿ ಕಾಯುವುದು ಬೇಡ ಹಲ್ಲಿ ಲೊಚಗುಟ್ಟಿದೆ, ಶುಭ ಸಂಕೇತ, ಗೆಲುವು ನಮ್ಮದೇ ಆಕ್ರಮಣ ನಡೆಸಿ ಎಂದಾಗ ಪಲ್ಲಿಯು ಮನದಲ್ಲಿ ಅಯ್ಯೋ ಮೂರ್ಖ ರಾಜಪುರೋಹಿತರೇ ನಾನು ಲೊಚಗುಟ್ಟಿದ್ದು ನನಗೆ ದಣಿವಾಗಿ ನೀರು ಬೇಕಿತ್ತು ಅಷ್ಟೇ ನಿಮಗೆ ಶುಭ ಸಂಕೇತ ನೀಡಲು ಅಲ್ಲ ಏಕೆ ಹೀಗೆ ಯೋಚಿಸಿದಿರಿ ಎನ್ನುವಾಗಲೇ ರಾಜ ವೀರಭಲ್ಲಾಳ ಹೌದ ರಾಜಪುರೋಹಿತರೆ ಹಾಗಾದರೆ ಆಕ್ರಮಣ ನಡೆಸಿ ವೀರ ಸೈನಿಕರೇ ಎನ್ನುವಾಗಲೇ ಸಮಯಕ್ಕಾಗಿ ಕಾಯುತ್ತಿದ್ದ ಚಂದ್ರಚೂಡನ ಸೈನ್ಯ ಎದುರಾಳಿ ಸೈನ್ಯ ದಾಳಿ ಮಾಡುವ ಮುನ್ನವೇ ವಿವಿಧ ತಂತ್ರಗಳಿಂದ ವೀರಬಲ್ಲಾಳನ ಸೈನ್ಯ ದಿಕ್ಕಾಪಾಲು ಆಗುವಂತೆ ಆಕ್ರಮಣ ನಡೆಸಿತು. ಇದರಿಂದ ವಿಚಲಿತರಾದ ವೀರಬಲ್ಲಾಳಣ ಸೈನ್ಯ ದಿಕ್ಕಾಪಾಲಾಗಿ ಓಡಿ ಪಲಾಯನಗೈದು ತನ್ನ ರಾಜ್ಯ ಸೇರಿಕೊಂಡಿತು.
ಇದರಿಂದ ಸಾಕಷ್ಟು ಅವಮಾನಿತನಾದ ವೀರಬಲ್ಲಾಳ ಹಲವು ವರುಷ ಯಾವುದೇ ಯುದ್ಧ ಮಾಡದೇ ಸುಮ್ಮನಾದ. ನಂತರ ಹೇಗಾದರೂ ಮಾಡಿ ವಿಕ್ರಮಪುರಿ ವಷಪಡಿಸಿಕೊಳ್ಳಲೇ ಬೇಕು ಎಂದು ಸೈನಿಕರಿಗೆ ಸಾಕಷ್ಟು ವಿವಿಧ ಯುದ್ಧ ತರಭೇತಿ ನೀಡಿ, ದೈವ ನೆರವಿಗಾಗಿ ಹಲವು ಹೋಮ ಹವನಗಳನ್ನು ಮಾಡಿದ ಇದರಿಂದ ಸಂತುಷ್ಟನಾದ ದೇವನು ಒಂದು ದಿನ ವೀರಬಲ್ಲಾಳನ ಕನಸಲ್ಲಿ ಬಂದು, ನೋಡು ಈ ಬಾರಿ ನೀನು ಆಕ್ರಮಣ ನಡೆಸು ವಿಜಯ ನಿನ್ನದೇ ಆಗುತ್ತದೆ, ಆದರೆ ನೀನು ಹಲ್ಲಿ ಅಥವಾ ಇತರ ಯಾವುದೇ ಶಕುನದಿಂದ ವಿಚಲಿತನಾಗಬಾರದು ಎಂದು ಹೇಳಿ ಅದೃಶ್ಯನಾದ. ನಂತರ ದೇವನು ಈಗ ವೀರಭಲ್ಲಾಳನ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿ ಆ ಹಲ್ಲಿಗೂ ಕನಸಲ್ಲಿ ಬಂದು ನೋಡು ವೀರಬಲ್ಲಾಳನು ಮತ್ತೆ ಯುದ್ಧಕ್ಕೆ ಬರುವವನಿದ್ದಾನೆ ಅವನಿಗೆ ವಿಜಯಿಯಾಗುವ ಅಭಯ ನೀಡಿದ್ದೇನೆ. ನೀನು ಅವನಿಗೆ ಶುಭಶಕುನ ನುಡಿಯಬೇಕು ಎಂದು ಹೇಳಿ ಅಂತರ್ಧಾನನಾದನು. ತದನಂತರ ಎಚ್ಚೆತ್ತ ರಾಜ ಇದು ಕನಸು ನಂಬುವುದು ಹೇಗೆ, ನಾನು ಯಾವಾಗಲೂ ಯುದ್ಧ ಗೆಲುವಿನ ಬಗ್ಗೆ ಯೋಚಿಸುತ್ತಿರುವದರಿಂದ ಹೀಗೆ ಕನಸು ಬಿದ್ದಿರಬಹುದು ಎಂದು ಸಮಾದಾನಗೊಂಡು ನಂತರ ಅದು ಏನೇ ಆಗಲಿ ಯುದ್ಧ ಮಾಡಿಯೇ ಬಿಡುವ ಎಂದು ತೀರ್ಮಾನಿಸಿ ಮತ್ತೆ ಸೈನ್ಯ ತೆಗೆದುಕೊಂಡು ವಿಕ್ರಮ ಪುರದ ಗಡಿಗೆ ನಿಲ್ಲಿಸಿಯೇ ಬಿಟ್ಟ. ನಂತರ ವೀರಬಲ್ಲಾಳನು ಜೋರಾಗಿ ಹೇ ಚಂದ್ರಚೂಡ ಈಗ ನಿನ್ನ ಯಾವುದೇ ಯುದ್ಧ ತಂತ್ರ ನನ್ನ ಮುಂದೆ ನಡೆಯದು, ನೋಡು ಈಗ ನಿನ್ನ ಸೈನ್ಯವನ್ನು ಹೇಗೆ ಧೂಳೀಪಟ ಮಾಡುತ್ತೇನೆ ಎನ್ನುವಾಗಲೇ ಅದೇ ಮರದಲ್ಲಿದ್ದ ಅದೇ ಹಲ್ಲಿಯು ತನ್ನ ಮನದಲ್ಲಿ, ಈ ಬಾರಿ ರಾಜನಿಗೆ ಕನಸಲ್ಲಿ ದೇವನ ಅನುಗ್ರಹವಾಗಿದೆ ಹಾಗಾಗಿ ದೇವನ ಆಜ್ಞೆಯಂತೆ ಅವನಿಗೆ ಶುಭಶಕುನ ನೀಡುವ ಎಂದು ಜೋರಾಗಿ ಲೊಚ್ ಲೊಚ್ ಎಂದು ಲೊಚಗುಟ್ಟಿತು ಇದನ್ನು ಗಮನಿಸಿದ ರಾಜ ಪುರೋಹಿತ ಮಹಾರಾಜರೇ ಹಲ್ಲಿಯು ಮತ್ತೆ ಅಪಶಕುನ ನೀಡುತ್ತಿದೆ ಕಳೆದ ಬಾರಿಯಂತೆ ಈ ಬಾರಿಯೂ ನಮಗೆ ಅಪಜಯವಾಗುತ್ತದೆ, ಇದನ್ನು ನಾವು ಶುಭಶಕುನವೆಂದು ಪರಿಗಣಿಸುವುದು ಬೇಡ ತಕ್ಷಣ ಹಿಂದಿರುಗುವ ಎಂದಾಗ ಪಲ್ಲಿಯು ತನ್ನ ಮನದಲ್ಲಿ ಅಯ್ಯೋ ಮೂರ್ಖ ಈ ಬಾರಿ ನಿಮಗೆ ಶುಭಶಕುನ ನೀಡುತ್ತಿದ್ದೇನೆ, ಮಹಾರಾಜರೇ, ನಿಮಗೆ ಕನಸಲ್ಲಿ ದೇವರ ಅನುಗ್ರಹವಾಗಿದೆ, ನಿಮಗೆ ಜಯ ಎಂದಿದ್ದಾರೆ ಆಕ್ರಮಣ ನಡೆಸಿ ಎಂದುಕೊಳ್ಳುತ್ತಿರುವಾಗಲೇ ರಾಜ ವೀರಭಲ್ಲಾಳ ಹೌದು ರಾಜಪುರೋಹಿತರೆ ನಾವು ಆಕ್ರಮಣ ನಡೆಸುವುದು ಬೇಡ ಪಲ್ಲಿ ಶಕುನದಂತೆ ನಾವು ಹಿಂತಿರುಗುವುದು ಕ್ಷೇಮ ಎಂದು ಸೈನಿಕರಿಗೆ ಹಿಂತಿರುಗಲು ಆದೇಶಿಸಿದ ಅದರಂತೆ ಎಲ್ಲರೂ ದಿಕ್ಕಾಪಾಲಾಗಿ ಹಿಂತಿರುಗುತ್ತಿರುವಾಗ ವಿಕ್ರಮಪುರಿ ಸೈನ್ಯ ಬೆಂಬೆಡದೆ ಬಂದು ಸಿಂಹಳಪುರವನ್ನು ಆಕ್ರಮಿಸಿಕೊಂಡಿತು.
ನೀತಿ: ಶಕುನ ಅಥವಾ ಅಪಶಕುಕನಗಳು ಹೀಗೆಯೇ ಆಗುತ್ತವೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ನಮ್ಮ ಕನಸನ್ನು ಭ್ರಮೆ ಎಂದುಕೊಳ್ಳುತ್ತೇವೆ, ಯಾರಿಗೆ ಗೊತ್ತು ಭ್ರಮೆ ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು. ಪ್ರಯತ್ನ ಪಟ್ಟರೆ ಮುಂದೆ ಬರುವ ಅದೃಷ್ಟವನ್ನು ಪಡೆಯಬಹುದು. ನಾವು ಕೆಲವೊಮ್ಮೆ ಶುಭಶಕುನವನ್ನು ಅಪಶಕುನ ಎಂದುಕೊಳ್ಳುತ್ತೇವೆ, ಅಪಶಕುನವನ್ನು ಶುಭಶಕುನ ಎಂದೂ ತಿಳಿಯುತ್ತೇವೆ, ಆದರೆ ಕೊನೆಗೆ ನಡೆಯುವುದೆಲ್ಲಾ ನಮ್ಮ ಹಣೆಬರಹದಂತೆ.
ರಚನೆ: ವೇಣುಗೋಪಾಲ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q