ಸರಗೂರು: ತಾಲ್ಲೂಕಿನ ಪಟ್ಟಣದ ನಾಲ್ಕನೇ ವಾರ್ಡಿನ ನಿವಾಸಿಯಾದ ಪಟ್ಟಣ ಪಂಚಾಯತ್ ಸದಸ್ಯ ಎಸ್.ಎಲ್. ರಾಜಣ್ಣ(56) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಎಸ್.ಎಲ್.ರಾಜಣ್ಣ, ಗ್ರಾಮೀಣ ಭಾಗದ ವ್ಯಕ್ತಿಯಾಗಿದ್ದು, ಇವರು ದಲಿತ ಕುಟುಂಬದಿಂದ ಬಡತನದಿಂದ ಬೆಳೆದು ಬಂದಿದ್ದು, ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಕ್ರೀಡಾಪಟುವಾಗಿದ್ದರು.
ಇವರು ಮನೆಯಲ್ಲಿ ಕಡು ಬಡತನ ಇದ್ದ ಕಾರಣ ವಿದ್ಯಾಬ್ಯಾಸ ಅರ್ಧಕ್ಕೆ ನಿಲ್ಲಿಸಿ, ಪಟ್ಟಣದಲ್ಲಿ ಯುವ ಪೀಳಿಗೆ ಯುವಕರಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದರು. ಗ್ರಾಮೀಣದ ದಲಿತರ ಸಮುದಾಯದ ನೊಂದ ಜನರಿಗೆ ಆಶಾಕಿರಣವಾಗಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹಾಗೂ ರಾಜಕೀಯ ನಾಯಕರ ಜೊತೆ ಒಡನಾಟ ಹೊಂದಿದ್ದು, ರಾಜಕೀಯ ಜೀವನದಲ್ಲಿ ಸಕ್ರಿಯವಾಗಿದ್ದರು. ಇವರು ಧರ್ಮಪತ್ನಿ ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಪಟ್ಞಣದಲ್ಲಿ ಇವರನ್ನು ಕಳೆದುಕೊಂಡು ಜನರು ಶೋಕಭರಿತರಾಗಿದ್ದಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


