nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’

    July 10, 2026

    ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ

    July 10, 2026

    ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ

    July 10, 2026
    Facebook Twitter Instagram
    ಟ್ರೆಂಡಿಂಗ್
    • ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’
    • ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ
    • ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ
    • ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್
    • ತಿಪಟೂರು: ಲಯನ್ಸ್ ಕ್ಲಬ್ ನ 8ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ
    • ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!
    • ಪಾವಗಡ: ಮಹಿಳೆ ಮೇಲೆ ಹಲ್ಲೆ ನಡೆಸಿ ಆಭರಣ ಕದ್ದಿದ್ದ ಆರೋಪಿ ಸೆರೆ
    • ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಿ: ಡಾ.ಚಂದ್ರಶೇಖರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪ್ರವಾಸಿಗರನ್ನು ಕೈಬೀಸಿ ಕರೆಯುವ ವನ ನಂದೀಶ್ವರ ಕ್ಷೇತ್ರ
    ಲೇಖನ February 5, 2025

    ಪ್ರವಾಸಿಗರನ್ನು ಕೈಬೀಸಿ ಕರೆಯುವ ವನ ನಂದೀಶ್ವರ ಕ್ಷೇತ್ರ

    By adminFebruary 5, 2025No Comments2 Mins Read
    vana nandishwara kshethra

    ವರದಿ: ನಂದೀಶ್ ನಾಯ್ಕ ಪಿ.

    ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಹೋಬಳಿಯ ಬಿ.ಹೊಸಹಳ್ಳಿ ಗ್ರಾಮದ ಬೆಟ್ಟಗುಡ್ಡಗಳ ನಡುವೆ ನೆಲೆ ನಿಂತಿರುವ ವನನಂದೀಶ್ವರ ದೇವರ ತಾಣ ಒಂದು ಮನೋಹರ ಕ್ಷೇತ್ರವಾಗಿದೆ.

    ಸುತ್ತಲೂ ಬೆಟ್ಟಗುಡ್ಡಗಳು, ಮಧ್ಯೆ ತಗ್ಗು ಪ್ರದೇಶ, ಎಲ್ಲವನ್ನೂ ಆವರಿಸಿರುವ ನೀಲಗಿರಿ ನೆಡುತೋಪು, ಪಕ್ಕದಲ್ಲೇ ಕಟ್ಟಿರುವ ಕೆರೆ, ಬೆಟ್ಟಗುಡ್ಡಗಳ ನಡುವೆ ಎದ್ದು ಕಾಣುವ ಹಸಿರು ವನರಾಶಿ, ಈ ಸುಂದರ ಪರಿಸರದ ನಡುವೆ ಸುತ್ತಲೂ ಬಿಲ್ವಪತ್ರೆ ಮರಗಳಿಂದ ಆವೃತವಾದ ಪ್ರಶಾಂತ ವಾತಾವರಣದಲ್ಲಿ ನೆಲೆ ನಿಂತಿರುವ ವನನಂದಿ  ಎಲ್ಲರ ಮನಸ್ಸನ್ನು ಸೂಚಿಗಲ್ಲಿನಂತೆ ಮೊದಲ ನೋಟದಲ್ಲೇ ಹಿಡಿದಿಡುತ್ತದೆ.

    ತಾಲ್ಲೂಕು ಕೇಂದ್ರದಿಂದ ಮರಿದಾಸನಹಳ್ಳಿ ಹಳ್ಳಿಗೆ ಬಂದು ವನಂತರವನ್ನು ಸೇರಬಹುದು ಅಥವಾ ಹೋಬಳಿ ಕೇಂದ್ರವಾದ ವೈ.ಎನ್.ಹೊಸಕೋಟೆ ಬಂದು ಬಿ.ಹೊಸಹಳ್ಳಿಯ ಮೂಲಕ ಸೇರಬಹುದಾಗಿದೆ.  ವನಂತರ ಸ್ಥಳವು ಮರಿದಾಸನಹಳ್ಳಿ ಮತ್ತು ಬಿ.ಹೊಸಹಳ್ಳಿ ಮಾರ್ಗಮಧ್ಯೆ ಪಶ್ಚಿಮದಲ್ಲಿ ಇರುವ ಬೆಟ್ಟಗಳ ಸಾಲಿನಲ್ಲಿ ಮುಖ್ಯ ರಸ್ತೆಯಿಂದ  ಸುಮಾರು ಕಾಲಳತೆಯ ದೂರದಲ್ಲಿದೆ.

    ಬಿಲ್ವಪತ್ರೆ ವನದಲ್ಲಿರುವ ವನಂತರ ವನನಂದಿಗೆ ಹರಕೆ ಹೊತ್ತು ಸೋಮವಾರದ  ರಾತ್ರಿ ಪೂಜೆ ಸಲ್ಲಿಸಿ ರಾತ್ರಿ ಪೂರಾ ಶಿವಾರಾಧನೆ ಮಾಡಿದರೆ ಖಂಡಿತವಾಗಿ ಮಳೆಯು ಬಂದೇ ಬರುತ್ತದೆ ಎಂಬುದು ಭಾಗದ ಜನಸಾಮಾನ್ಯರ ಮತ್ತು ರೈತರ ನಂಬಿಕೆ.

    ದೇವಾಲಯದಿಂದ  ಅನತಿ ದೂರದಲ್ಲಿರುವ ಎಂದೂ ಬತ್ತದ ತಲಪೆರಿಕಿ/ ಕಲ್ಯಾಣಿಯಲ್ಲಿ ಮಿಂದು ಬಿಲ್ವಪತ್ರೆ ಮತ್ತು  ಬಸವನ ಪಾದ ಪುಷ್ಪಗಳಿಂದ ಇಲ್ಲಿನ ನಂದಿಶ್ವರನಿಗೆ  ಹರಕೆ ಹೊತ್ತು ಪೂಜೆ ಸಲ್ಲಿಸಿ ಶಿವಾರಾಧನೆ ಮಾಡಿದರೆ ಭಕ್ತರ ಕೋರಿಕೆಗಳು ನೆರವೇರುತ್ತವೆ ಎಂಬುದು ಇಲ್ಲಿನ ಪ್ರತೀತಿ. ತಮ್ಮ ಕೋರಿಕೆಗಳು ನೆರವೇರಿದರೆ ಈ ಸ್ಥಳದಲ್ಲಿ ಭಕ್ತಾದಿಗಳು ಹರಕೆಯ ರೂಪದಲ್ಲಿ ಅನ್ನದಾಸೋಹ ನಡೆಸುತ್ತಾರೆ. ಜೊತೆಗೆ  ಭಕ್ತಾದಿಗಳು ಪ್ರತಿ ಸೋಮವಾರದಂದು ಹಾಗೂ ವಿಶೇಷವಾಗಿ ಶ್ರಾವಣಮಾಸದಲ್ಲಿ ವಿಶಿಷ್ಟ ಪೂಜೆಗಳನ್ನು ಹಮ್ಮಿಕೊಳ್ಳುತ್ತಾರೆ.

    ಇಂತಹ ವಿಶೇಷ ಮಹಿಮೆಯೊಂದಿಗೆ ಪ್ರಾಕೃತಿಕ ಶಕ್ತಿ ಹೊಂದಿರುವ ಈ ಸ್ಥಳವನ್ನು ಸ್ಥಳೀಯ ರೈತರು ಮತ್ತು ಭಕ್ತವೃಂದ ಸೇರಿಕೊಂಡು ಇತ್ತೀಚೆಗೆ ‘ವನಂತರ ನಂದೀಶ್ವರ ಶಿವ ದೇವಾಲಯ ಸೇವಾ ಟ್ರಸ್ಟನ್ನು ಮಾಡಿಕೊಂಡು ತಮ್ಮ ಸ್ವಂತ ಹಣದ ಜೊತೆಗೆ ಭಕ್ತಾಧಿಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ನೀರಿನ ಸೌಲಭ್ಯ, ರಾತ್ರಿ ಉಳಿದುಕೊಳ್ಳಲು ಒಂದು ಕೊಠಡಿ, ಶುಭಕಾರ್ಯಗಳಿಗೆ ಅನುಕೂಲವಾಗುವಂತೆ ತೆರೆದ ಬೋಜನಾಲಯ, ಸುಂದರ ಉದ್ಯಾನವನ ನಿರ್ಮಾಣಗೊಂಡಿವೆ. ಮಕ್ಕಳು ಆಟವಾಡುವ ಸಲುವಾಗಿ ತಿರುಗಣಿ ಇತ್ಯಾದಿಗಳನ್ನು ನಿರ್ಮಿಸಲಾಗಿದೆ.

    ಈಶ್ವರ ದೇವಾಲಯ ಅಲ್ಪಮಟ್ಟಿನ ಜೀರ್ಣೋದ್ದಾರ ಕಂಡಿದೆ. ದೇವಾಲಯದಲ್ಲಿ ಪಾರ್ವತಿ, ಗಣಪತಿ ಹಾಗೂ ನಾಗರ ಕಲ್ಲುಗಳ ಪ್ರತಿಷ್ಟಾಪನೆ ಮಾಡಲಾಗಿದೆ. ಬಿಲ್ವ ವನದಲ್ಲಿ ವಿವಿಧ ಪವಿತ್ರ ಮರಗಳನ್ನು ನೆಡುತ್ತಿದ್ದಾರೆ. ಬಂದುಹೋಗುವ ಭಕ್ತಾದಿಗಳಿಗೆ ಗುಡ್ಡ ಪ್ರದೇಶದಲ್ಲಿ ಸೂಕ್ತವಾಗಿ ವಾಹನಗಳು ಹೋಗಲು ರಸ್ತೆಯನ್ನು ಮಾಡಲಾಗಿದೆ.

    ವನಂತರ ನಂದಿಯ ಪ್ರತಿಷ್ಟಾಪನೆ ಮತ್ತು ಆರಾಧನೆ ಬಹಳಷ್ಟು ಇತಿಹಾಸವಿದ್ದು, ಅವಲೋಕಿಸಿ ಹೊರತೆಗೆಯುವ ಕಾರ್ಯ ನಡೆಯಬೇಕಿದೆ. ಇಲ್ಲಿನ ಇತಿಹಾಸ ಕಾಲಗರ್ಭದಲ್ಲಿ ಹುದುಗಿದ್ದರೂ ಸ್ಥಳ ಮಹಿಮೆ ಮಾತ್ರ ಅಪಾರವಾಗಿದೆ. ವಿಶೇಷವಾಗಿ ಇದೊಂದು ಸುಂದರವಾದ ರಮ್ಯವಾದ ಧಾರ್ಮಿಕ ಸ್ಥಳದ ಜೊತೆಗೆ ಚಾರಣಪ್ರಿಯರಿಗೆ ಮತ್ತು ಪ್ರಕೃತಿ ಆರಾಧಕರಿಗೆ ಸೂಕ್ತವಾದ ಪ್ರದೇಶ ಎನ್ನಬಹುದು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4


    Provided by
    Provided by
    admin
    • Website

    Related Posts

    ಮಧ್ಯಾಹ್ನದ ಊಟದ ರುಚಿ ಹೆಚ್ಚಿಸಲು ಇಲ್ಲಿವೆ 6 ಸುಲಭ ಚಟ್ನಿ ರೆಸಿಪಿಗಳು!

    July 8, 2026

    ಡ್ರಾಮ: ಮಿತ್ರರು ಕಳ್ಳತನಕ್ಕೆ ಹೋದಾಗ..! | ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು. (ಪ್ರಸಂಗ 5)

    July 5, 2026

    ವೈದ್ಯರು – ಸಮಾಜದ ಜೀವನಾಡಿ

    July 1, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’

    July 10, 2026

    ಬೆಂಗಳೂರು: ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಹಾಗೂ ಕೆಲಸದ ಒತ್ತಡ ಇಳಿಸಲು ಒತ್ತಾಯಿಸಿ ಲಕ್ಷಾಂತರ ಅಂಗನವಾಡಿ (ಐಸಿಡಿಎಸ್) ಮತ್ತು ಬಿಸಿಯೂಟ…

    ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ

    July 10, 2026

    ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ

    July 10, 2026

    ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್

    July 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.