ನೆಲ, ಜಲ, ಭಾಷೆ ವಿಷಯದಲ್ಲಿ ಯಾವಾತ್ತು ರಾಜಿಯಾಗುವುದಿಲ್ಲ ಎಂದು ನಟಿ ಪೂಜಾಗಾಂಧಿ ಹೇಳಿದರು. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಫಿಲ್ಡ್ ಚೇಂಬರ್ ಮುಂದೆ ಆಯೋಜಿಸಿರುವ ಧರಣಿಯಲ್ಲಿ ಅವರು ಮಾತನಾಡಿದರು. ಕಾವೇರಿ ನಮ್ಮದು, ಕೆಆರ್ ಎಸ್ ನಿಂದ ಒಂದೂ ಹನಿಯನ್ನು ಬಿಡಬಾರದು. ನಮ್ಮ ರಾಜ್ಯದ ರೈತರ ಹಿತವೂ ನಮಗೆ ಮುಖ್ಯ ಎಂದು ಕಿಡಿಕಾರಿದರು. ಮೇಕೆದಾಟು ಯೋಜನೆ ನಮಗೆ ಎಷ್ಟು ಮುಖ್ಯವಾಗಿದೆ ಎನ್ನುವುದನ್ನು ಮನಗಾಣಬೇಕು ಎಂದು ಸಲಹೆ ನೀಡಿದರು.
ಈ ವೇಳೆ ನಟಿ ಪೂಜಾ ಗಾಂಧಿ ಮಾತನಾಡಿ ಕನ್ನಡಿಗರು ಸ್ನೇಹ, ಸಹಬಾಳ್ವೆಯಿಂದ ಇದ್ದೇವೆ. ಈ ನಾಡಿಗೆ ಚೆನ್ನಾಗಿ ಮಳೆ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ. ಕನ್ನಡಿಗರು ತುಂಬಾ ತಾಳ್ಮೆ ಇರುವವರು. ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಮೇಕೆದಾಟು ಎಷ್ಟು ಅವಶ್ಯಕ ಅನ್ನೋದನ್ನು ಯೋಚಿಸಬೇಕು. ಎಲ್ಲದಕ್ಕೂ ಒಂದು ಕೀಲಿಗೈ ಇರುತ್ತೆ. ಹಾಗೇ ಎಲ್ಲಾ ಸಮಸ್ಯೆಗೂ ಪರಿಹಾರ ಇರುತ್ತೆ. ನಾವು ಆ ಪರಿಹಾರ ಹುಡುಕಲು ಮುಂದಾಗಬೇಕು ಎಂದು ಹೇಳಿದರು.


