ಬೆಂಗಳೂರು: ಗಂಡನ ಅಕ್ರಮ ಸಂಬಧಕ್ಕೆ ಬೇಸತ್ತ ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಜಗೋಪಾಲ ನಗರದ ಮೋಹನ್ ಥಿಯೇಟರ್ ಬಳಿಯ ಮನೆಯೊಂದರಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯ ಹೆಸರು ಕಾವ್ಯ (22). ದಾಂಪತ್ಯ ಜೀವನ ಶುರುವಾಗಿ ಇನ್ನೇನು 2 ವರ್ಷ ಮಾತ್ರ ಆಗಿದ್ದು, ಒಂದು ವರ್ಷದ ಮುದ್ದಾದ ಮಗುವೊಂದಿತ್ತು.
ಮದುವೆಯಾಗುವ ಯುವಕ ಒಬ್ಬ ಸಾಫ್ಟ್ ವೇರ್ ಎಂಜಿನಿಯರ್, ಒಳ್ಳೆಯ ಕೆಲಸದಲ್ಲಿದ್ದಾನೆ ಎಂಬ ಕಾರಣಕ್ಕೆ ಐವತ್ತು ಲಕ್ಷ ರೂ. ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ದುಡ್ಡಿನ ಜತೆ ಅರ್ಧ ಕೆಜಿ ಚಿನ್ನ ಕೂಡಾ ಕೊಟ್ಟಿದ್ದರು. ಆದರೆ, ಆ ಮನುಷ್ಯ ಮದುವೆಯಾದ ಕೂಡಲೇ ಕೆಲಸ ಬಿಟ್ಟಿದ್ದ. ಆಕೆಯ ಪೋಷಕರು ಕೊಟ್ಟ ವರದಕ್ಷಿಣೆಯ ಹಣದಲ್ಲೇ ದಿನದೂಡುತ್ತಿದ್ದ ಎನ್ನಲಾಗಿದೆ.
ಇಷ್ಟಾದರೂ ಮುಗಿಯಲಿಲ್ಲ. ಬೇರೆ ಹೆಣ್ಣಿನ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಕೇಳಿದರೆ ತಂಗಿ ಅಂತಿದ್ದ! ಇಂಥ ನೀಚ ಗಂಡನ ಅಕ್ರಮ ಸಂಬಂಧದಿಂದ ಬೇಸತ್ತು ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆಕೆಯ ಹೆತ್ತವರು ಆರೋಪ ಮಾಡುತ್ತಿದ್ದಾರೆ.


