ವಿಪರೀತ ಕುಡಿದು ಬಂದು ಗಲಾಟೆ ಮಾಡುತ್ತಿದ್ದನೆಂಬ ಕಾರಣಕ್ಕೆ ಪತಿಯ ಮರ್ಮಾಂಗ ಹಿಚುಕಿ ಸಾಯಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಲಂಬಾಣಿ ತಾಂಡಾದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಟೋಪಣ್ಣ ಲಮಾಣಿ(44) ಎಂಬಾತ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪತ್ನಿ ಶಾಂತವ್ವ ಲಮಾಣಿ ಎಂಬಾಕೆಯೇ ಪತಿಯನ್ನ ಕೊಲೆ ಮಾಡಿದ ಆರೋಪಿಯಾಗಿದ್ದು, ಸಹಜ ಸಾವು ಎಂದು ಅಂತ್ಯಕ್ರಿಯೆ ಮಾಡಿದ ಹದಿನೈದು ದಿನಗಳ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ವಿಪರೀತ ಕುಡಿತದ ಚಟ ಹೊಂದಿದ್ದ ಟೋಪಣ್ಣ. ಪ್ರತಿ ದಿನವೂ ಮದ್ಯ ಸೇವನೆ ಮಾಡಿ ಮನೆಗೆ ಬರುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿ ಶಾಂತವ್ವ. ಪತಿಯನ್ನ ಮುಗಿಸಲು ಸಂಚು ಮಾಡಿದ್ದಳು. ಎಂದಿನಂತೆ ಹದಿನೈದು ದಿನಳ ಹಿಂದೆಯೂ ಮದ್ಯ ಸೇವನೆ ಮಾಡಿ ಮನೆಗೆ ಬಂದಿದ್ದ ಪತಿ ಟೋಪಣ್ಣ. ಕುಡಿದು ನಶೆಯಲ್ಲಿದ್ದ ಪತಿಯ ಮರ್ಮಾಂಗ ಹಿಚುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಬಳಿಕ ಯಾರಿಗೂ ಅನುಮಾನ ಬಾರದಂತೆ, ಕುಡಿದ ನಶೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ಕತೆ ಕಟ್ಟಿದ್ದಾಳೆ ಎನ್ನಲಾಗಿದೆ.
ಟೋಪಣ್ಣ ಕುಡಿತದ ಚಟ ಕಂಡಿದ್ದ ಕುಟುಂಬಸ್ಥರು, ಸ್ಥಳೀಯರು ಸಹಜವಾಗಿ ಬಿದ್ದು ಸತ್ತಿರಬಹುದು ಎಂದು ನಂಬಿದ್ದಾರೆ. ಬಳಿಕರು ಕುಟಂಬಸ್ಥರು ಟೋಪಣ್ಣನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಆದರೆ ದಿನಗಳು ಕಳೆದಂತೆ ಶಾಂತವ್ವಳ ಬಾಯಿ ಸುಮ್ಮನಿರಬೇಕಲ್ಲ. ಯಾರೊಂದಿಗೆ ಮೊಬೈಲ್ ನಲ್ಲಿ ಮಾತಾಡ್ತಾ ಹೆಚ್ಚು ಸಮಯ ಕಳೆಯುತ್ತಿದ್ದಳು. ಈ ವೇಳೆ ಮೊಬೈಲ್ ನಲ್ಲಿ ಮಾತಾಡೋ ಭರದಲ್ಲಿ ಗಂಡನ ಮರ್ಮಾಂಗ ಹಿಚುಕಿ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾಳೆ. ಇದನ್ನ ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಸಮಾಜದ ಹಿರಿಯರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಹಿರಿಯರು ಸಭೆ ಸೇರಿ ಶಾಂತವ್ವ ಮೊಬೈಲ್ ಪೋನ್ ತಪಾಸಣೆ ಮಾಡಿ ವಿಚಾರಿಸಿದ್ದರು. ಈ ವೇಳೆ ಗಂಡನ ಮರ್ಮಾಂಗ ಹಿಚುಕಿ ಸಾಯಿಸಿರುವುದಾಗಿ ಶಾಂತವ್ವ ಒಪ್ಪಿಕೊಂಡಿದ್ದಾಳೆ.
ಘಟನೆ ಸಂಬಂಧಿಸಿದಂತೆ ಇಂದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಶಾಂತವ್ವಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


