ಬೆಂಗಳೂರು : ಮಲ್ಲೇಶ್ವರ 13ನೇ ಕ್ರಾಸ್‌ನಲ್ಲಿ ನಡೆದಿದ್ದ ಸರ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಪತಿಗೆ ಬುದ್ಧಿ ಕಲಿಸಲು ದೂರುದಾರ ಮಹಿಳೆಯೇ ಕಳ್ಳತನ ನಾಟಕವಾಡಿದ್ದ ವಿಷಯವನ್ನು ಪತ್ತೆ ಮಾಡಿದ್ದಾರೆ.
109 ಗ್ರಾಂ ತೂಕದ ಚಿನ್ನದ ಸರ ಕಳ್ಳತನವಾದ ಬಗ್ಗೆ ಮಹಿಳೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಮಹಿಳೆಯೇ ಸುಳ್ಳು ದೂರು ನೀಡಿದ್ದು ಗೊತ್ತಾಗಿದೆ. ಇದೀಗ, ಮಹಿಳೆಗೆ ನೋಟಿಸ್ ನೀಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಆಕೆಯ ಸ್ನೇಹಿತರಾದ ಧನಂಜಯ್ ಹಾಗೂ ರಾಕೇಶ್‌ನನ್ನು ಬಂಧಿಸಲಾಗಿದೆ.


