ದುಬೈನಲ್ಲಿ ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ (ಡಿಎಕ್ಸ್ಬಿ) ಮತ್ತು ಅಲ್ಮಖ್ತೂಮ್ ಏರ್ಪೋರ್ಟ್ ಎಂಬ ಎರಡು ಏರ್ಪೋರ್ಟ್ ಗಳಿವೆ. ವಿಶ್ವದ ಅತ್ಯಂತ ಬ್ಯುಸಿ ಏರ್ಪೋರ್ಟ್ ಗಳಲ್ಲಿ ದುಬೈ ವಿಮಾನ ನಿಲ್ದಾಣ ಒಂದು. ಇಲ್ಲಿ ಸುಮಾರು 9 ಕೋಟಿ ಜನರು ವರ್ಷದಲ್ಲಿ ಬಂದು ಹೋಗುತ್ತಾರೆ. ಈ ಏರ್ಪೋರ್ಟ್ ನಿಂದ 45 ಕಿಮೀ ದಕ್ಷಿಣಕ್ಕೆ ಅಲ್ಮಖ್ತೂನ್ ಏರ್ಪೋರ್ಟ್ ಇದೆ. 2010ಕ್ಕೆ ಆರಂಭವಾದ ಇದರಲ್ಲಿ ಸದ್ಯ ಒಂದು ಟರ್ಮಿನಲ್ ಮತ್ತು ಎರಡು ರನ್ ವೇ ಗಳಿವೆ.
ಈಗ ಇರುವ ಯೋಜನೆಯಲ್ಲಿ ಅಲ್ಮಖ್ತೂನ್ ಏರ್ಪೋರ್ಟ್ ನಲ್ಲಿ ಹೊಸ ಟರ್ಮಿನಲ್ ಸಿದ್ಧಗೊಳಿಸಲಾಗುತ್ತಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗುತ್ತದೆ. 400 ವಿಮಾನ ಗೇಟ್ ಗಳು ಇರಲಿವೆ. ಐದು ಪರ್ಯಾಯ ರನ್ವೇಗಳನ್ನು ನಿರ್ಮಿಸಲಾಗುತ್ತಿದೆ. ಇದು ಪೂರ್ಣವಾಗಿ ಸಿದ್ಧಗೊಂಡರೆ ದುಬೈ ಇಂಟರ್ ನ್ಯಾಷನಲ್ ಏರ್ಪೋರ್ಟ್ ಏನಿದೆ ಅದಕ್ಕಿಂತ ಐದು ಪಟ್ಟು ಬೃಹತ್ತಾಗಿರಲಿದೆ ಹೊಸ ಎರ್ಪೋರ್ಟ್. ಎರಡೂವರೆ ಕೋಟಿಗಿಂತಲೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡುವಷ್ಟು ಬೃಹತ್ತಾಗಿರಲಿದೆ ಇದು.
ಈ ಏರ್ಪೋರ್ಟ್ ನಿರ್ಮಾಣದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಯೋಗವಾಗಲಿರುವ ಹೊಸ ಏವಿಯೇಶನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯಂತೆ. ಏರ್ಪೋರ್ಟ್ ಸುತ್ತಲೂ ನಗರವನ್ನೂ ನಿರ್ಮಿಸಲಾಗುತ್ತಿದೆ. ಲಕ್ಷಾಂತರ ಮನೆಗಳೂ ಸುತ್ತಲೂ ನಿರ್ಮಾಣವಾಗಲಿವೆ ಎನ್ನಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296