ಎಷ್ಟೋ ಜನರಿಗೆ ಹಲವಾರು ಬಾರಿ ತಮ್ಮ ತಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂಬ ಅರಿವೇ ಇರುವುದಿಲ್ಲ. ಆದರೆ ಹ್ಯಾಕರ್ ಗಳು ಮತ್ತು ಅಪರಾಧಿಗಳು ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯುತ್ತಾರೆ ಮತ್ತು ಅವರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುವುದು ಇವರ ಗುರಿಯಾಗಿರುತ್ತದೆ.
ಈ ವಂಚಕರು ಹಲವು ಬಾರಿ ಬಳಕೆದಾರರಿಗೆ ಮುಗ್ದ ಜನರನ್ನು ಬ್ಲ್ಯಾಕ್ ಮೇಲ್ ಮಾಡಿ ಅವರ ವೈಯಕ್ತಿಕ ಡೇಟಾ ಸೋರಿಕೆ ಮಾಡಿ ಹಣ ವಸೂಲಿ ಮಾಡುತ್ತಾರೆ. ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಈ ಕೆಳಗೆ ಪಟ್ಟಿ ಮಾಡಲಾಗಿರುವ ಸಾಮಾನ್ಯ 3 ಲಕ್ಷಣಗಳು ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮೊಬೈಲ್ ಹ್ಯಾಕ್ (Phone Hack) ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಕಂಡುಹಿಡಿಯಬಹುದು. ವಾಸ್ತವವಾಗಿ ಹ್ಯಾಕರ್ ಗಳು ನಿಮ್ಮ ಫೋನ್ ಅನ್ನು ಪ್ರವೇಶಿಸಿದಾಗ ಅಂದರೆ ಫೋನ್ ಅನ್ನು ಹ್ಯಾಕ್ ಮಾಡಿದಾಗ ಫೋನ್ ನಲ್ಲಿ ಈ ಕೆಲವು ಸಿಗ್ನಲ್ ಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಇದ್ದಕ್ಕಿದ್ದಂತೆ ಮೊಬೈಲ್ ನಿಧಾನವಾಗುವುದು ಅಥವಾ ಸ್ವಿಚ್ ಆಫ್ ಆಗುವುದು:
ಅನೇಕ ಬಾರಿ ಫೋನ್‌ನಲ್ಲಿ ಮಾಲ್‌ವೇರ್ ಇದ್ದಾಗ ಇಲ್ಲಿಯವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ನಿಮ್ಮ ಫೋನ್ ಇದ್ದಕ್ಕಿದ್ದಂತೆ ನಿಧಾನವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಹ್ಯಾಂಗ್ ಆಗುತ್ತಿದೆ ಎಂದು ಹೇಳುತ್ತಾರೆ. ಆದರೆ ಇದು ಹ್ಯಾಂಗಿಂಗ್ ನಿಂದ ಮಾತ್ರವಲ್ಲದೆ ಹ್ಯಾಕಿಂಗ್ ನಿಂದಲೂ ಸಂಭವಿಸುತ್ತದೆ. ಪದೇ ಪದೇ ಮೊಬೈಲ್ ಸ್ಕ್ರೀನ್ ಫ್ರೀಜ್ ಅಥವಾ ಹ್ಯಾಂಗ್ ಆಗುವುದು ಮತ್ತು ಫೋನ್ ಕ್ರ್ಯಾಶ್ ಆಗುವುದು ಕೂಡ ಹ್ಯಾಕಿಂಗ್ನ ಸಾಮಾನ್ಯ ಲಕ್ಷಣಗಳಾಗಿವೆ.
ಇದ್ದಕ್ಕಿದ್ದಂತೆ ಫೋನ್ ಸೆನ್ಸರ್ ಬಳಕೆಯಾದ್ರೆ Phone Hack ಎಂದರ್ಥ:
ನಿಮ್ಮ ಫೋನ್‌ನಲ್ಲಿ ಮಾಲ್ ವೇರ್ ಅಥವಾ ವಂಚನೆ ಅಪ್ಲಿಕೇಶನ್ ಇದ್ದರೆ ನಿಮ್ಮ ಮೊಬೈಲ್ ಬ್ಯಾಟರಿ ವೇಗವಾಗಿ ಖಾಲಿಯಾಗುವುದು ಹ್ಯಾಕಿಂಗ್ ನ ಸಂಕೇತವಾಗಿದೆ. ಫೋನ್ ನ ಬ್ಯಾಟರಿಯು ಸಾಮಾನ್ಯಕ್ಕಿಂತ ವೇಗವಾಗಿ ಖಾಲಿಯಾಗುತ್ತದೆ ಏಕೆಂದರೆ ಸ್ಕ್ರೀನ್ ಆಫ್ ಆಗುವುದು, ಲೊಕೇಶನ್, ಬ್ಲೂಥೂತ್, ಡೇಟಾ ಅಥವಾ Wi-Fi ಆನ್ ಆಗುವುದು ನಿಮ್ಮ ಡೇಟಾವನ್ನು ಕದಿಯುತ್ತಿರುವಾಗಲೂ ಈ ಅಪ್ಲಿಕೇಶನ್ ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಮೊಬೈಲ್ ಸೆನ್ಸರ್ ಮತ್ತೆ ಮತ್ತೆ ಪತ್ತೆಹಚ್ಚಲು ಪ್ರಾರಂಭಿಸುವುದು ನಿಮ್ಮ ಮೊಬೈಲ್ ಹ್ಯಾಕ್ ಆಗಿರುವ ಸಂಕೇತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q